ಸಿನಿಮಾ ಸುದ್ದಿಬಿಗ್ ಬಾಸ್ ಕನ್ನಡ 10: ನಮ್ರತಾ ಗೌಡ ಹೊರಕ್ಕೆ; 6 ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 10' ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿದೆ. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದರು. ಈಗ ನಮ್ರತಾ ಗೌಡ ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶಿಸಿದ್ದಾರೆ.