ಸಿನಿಮಾ ಸುದ್ದಿ

ಶಿವಣ್ಣನ ಜೊತೆ ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾ

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ರ ನೂತನ ಸಿನಿಮಾವೊಂದು ಸೆಟ್ಟೇರಿದ್ದು, ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಶಿವಣ್ಣನ ಜೊತೆ ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾ
ಶಿವಣ್ಣನ ಜೊತೆ ಹೇಮಂತ್ ರಾವ್
Published On :

ಬೆಂಗಳೂರು: ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ರ ನೂತನ ಸಿನಿಮಾವೊಂದು ಸೆಟ್ಟೇರಿದ್ದು, ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಹೌದು.. ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ (Hemanth Rao) ಮುಂದಿನ ಚಿತ್ರದ ಬಗ್ಗೆ ಅಪ್‌ಡೇಡ್ ಸಿಕ್ಕಿದ್ದು, ‘ಸಪ್ತಸಾಗರದಾಚೆ ಎಲ್ಲೋ’ ಮೂಲಕ ಪ್ರಿಯಾ-ಮನು ಕಥೆ ಹೇಳಿ ಗೆದ್ದಿದ್ದ ಹೇಮಂತ್ ರಾವ್ ಇದೀಗ ಶಿವರಾಜ್‌ಕುಮಾರ್ (Shivarajkumar) ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. 

ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದು, ಹೇಮಂತ್ ರಾವ್ ಅವರು ಶಿವಣ್ಣ ಮತ್ತು ಈ ಚಿತ್ರದ ನಿರ್ಮಾಪಕ ವೈಶಾಖ್ ಜೆ ಗೌಡ ಜೊತೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಶೇರ್ ಮಾಡಿ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ. ಶಿವಣ್ಣ ಜೊತೆ ಸಿನಿಮಾ ಮಾಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಕವಲುದಾರಿ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಮೂಲಕ ಖ್ಯಾತಿಗಳಿಸಿದ್ದ ನಿರ್ದೇಶಕ ಹೇಮಂತ್ ರಾವ್ ಅವರು ಶಿವಣ್ಣನಿಗೆ ಕಥೆ ಹೇಳಿದ್ದು, ಕಥೆ ಕೇಳಿದ ಶಿವಣ್ಣ ಕೂಡ ಥ್ರಿಲ್ ಆಗಿ ಕಥೆ ಓಕೆ ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಶಿವಣ್ಣ ಮತ್ತು ಹೇಮಂತ್ ರಾವ್ ಕಾಂಬೋದಲ್ಲಿ ಒಂದು ವಿಭಿನ್ನ ಸಿನಿಮಾ ಮೂಡಿ ಬರಲಿದೆ.

ಅಂದಹಾಗೆ ‘ಜೈಲರ್’ ಸಕ್ಸಸ್ ನಂತರ ಶಿವಣ್ಣ ಮತ್ತಷ್ಟು ಬ್ಯುಸಿಯಾಗಿದ್ದು, ಭೈರತಿ ರಣಗಲ್, ಕರಟಕ ಧಮನಕ, ಘೋಸ್ಟ್ 2, ರಾಮ್ ಚರಣ್ ಜೊತೆಗಿನ ಹೊಸ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.