ಸಿನಿಮಾ ಸುದ್ದಿ

ಮದುವೆ ವದಂತಿ: ಕೊನೆಗೂ ಮೌನ ಮುರಿದ ಸ್ಯಾಂಡಲ್'ವುಡ್ ಕ್ವೀನ್, ರಮ್ಯಾ ಹೇಳಿದ್ದೇನು?

ಟೆಕ್ಸ್‌ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾ ಅವರ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು, ನವೆಂಬರ್ ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಲಿದೆ ಎನ್ನಲಾಗಿತ್ತು.

ಮದುವೆ ವದಂತಿ: ಕೊನೆಗೂ ಮೌನ ಮುರಿದ ಸ್ಯಾಂಡಲ್'ವುಡ್ ಕ್ವೀನ್, ರಮ್ಯಾ ಹೇಳಿದ್ದೇನು?
ನಟಿ ರಮ್ಯಾ
Published On :

ಮದುವೆ ವದಂತಿ ಬಗ್ಗೆ ಕೊನೆಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಮೌನ ಮುರಿದಿದ್ದು, ಅಂತೆಕಂತೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿರುವ ರಮ್ಯಾ ಅವರು, ಮಾಧ್ಯಮದವರೇ ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಎಷ್ಟು ಬಾರಿ ಎಂಬುದರ ಲೆಕ್ಕವೇ ನನಗಿಲ್ಲ. ಒಂದು ವೇಳೆ ಮದುವೆಯಾದರೆ ನಾನೇ ಅದನ್ನು ನಿಮಗೆ ತಿಳಿಸುತ್ತೇವೆ. ಅನಧಿಕೃತ ಮೂಲಗಳಿಂದ ಬಂದ ವದಂತಿ ಹಬ್ಬಿಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.

Story image

ಟೆಕ್ಸ್‌ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾ ಅವರ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು, ನವೆಂಬರ್ ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಲಿದೆ ಎನ್ನಲಾಗಿತ್ತು.

ರಮ್ಯಾ ಅವರು ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ಅಭಿನಯಿಸಬೇಕಿತ್ತು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಅವರು ನಟಿಸಿಬೇಕಿತ್ತು. ಕಾರಣಾಂತರಗಳಿಂದ ಅವರು ಆ ಪಾತ್ರಗಳನ್ನು ಅರ್ಧಕ್ಕೆ ಬಿಟ್ಟರು.

ರಮ್ಯಾ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಮದುವೆಯ ಬಗ್ಗೆ ಗಾಸಿಪ್​ ಕೇಳಿಬಂದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಆದರೆ, ಇದೀಗ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.