15 ವರ್ಷಗಳ ದಾಂಪತ್ಯ ಜೀವನ ಅಂತ್ಯ: ಪತ್ನಿ ಆರತಿಗೆ ನಟ ಜಯಂ ರವಿ ವಿಚ್ಛೇದನ
ಜಯಂ ರವಿ ಮತ್ತು ಆರತಿ ನಡುವಿನ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಬಿದ್ದಿದೆ. 15 ವರ್ಷಗಳ ಹಿಂದೆ ಜಯಂ ರವಿ ಮತ್ತು ಆರತಿ ಅವರು ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಕಾಲಿವುಡ್ ಖ್ಯಾತ ನಟ ಜಯಂ ರವಿ ಅವರು ಡಿವೋರ್ಸ್ ಪಡೆದುಕೊಂಡಿದ್ದಾರೆ. ಪತ್ನಿ ಆರತಿ ಜೊತೆಗಿನ ಸಂಸಾರಕ್ಕೆ ಅವರು ಅಂತ್ಯ ಹಾಡಿದ್ದಾರೆ. ಜಯಂ ರವಿ ಮತ್ತು ಆರತಿ ನಡುವಿನ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಬಿದ್ದಿದೆ. 15 ವರ್ಷಗಳ ಹಿಂದೆ ಜಯಂ ರವಿ ಮತ್ತು ಆರತಿ ಅವರು ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇಷ್ಟು ವರ್ಷಗಳ ಬಳಿಕ ರವಿ ಮತ್ತು ಆರತಿ ಅವರು ಡಿವೋರ್ಸ್ ಪಡೆದಿದ್ದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ವಿಚ್ಛೇದನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಯಂ ರವಿ, ವೈಯಕ್ತಿಕ ಕಾರಣಗಳಿಂದ ಬೇರ್ಪಟ್ಟಿರುವುದಾಗಿ’ ತಿಳಿಸಿದ್ದಾರೆ. ತರಾತುರಿಯಲ್ಲಿ ಈ ನಿರ್ಧಾರಕ್ಕೆ ಬಂದಿಲ್ಲ. ವಿಚ್ಛೇದನ ತೆಗೆದುಕೊಳ್ಳುವ ಮುನ್ನ ಈ ಬಗ್ಗೆ ಹಲವು ಬಾರಿ ಚರ್ಚಿಸಿದ್ದೇವೆ. ಇಬ್ಬರ ಹಿತದೃಷ್ಟಿಯನ್ನು ಪರಿಗಣಿಸಿ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ. ಈ ವಿಷಯದಲ್ಲಿ ಯಾವುದೇ ಊಹೆ, ವದಂತಿ ಅಥವಾ ಆರೋಪಗಳಿಗೆ ಕಿವಿ ಕೊಡಬೇಡಿ. ಜನರಿಗೆ ಮನರಂಜನೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ನನಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಹಲವು ಅಧ್ಯಾಯಗಳನ್ನು ಹೊಂದಿದ ಪಯಣವೇ ಜೀವನ. ಎಲ್ಲ ಅಧ್ಯಾಯಕ್ಕೂ ಅದರದ್ದೇ ಆದ ಅವಕಾಶ ಮತ್ತು ಸವಾಲುಗಳು ಇವೆ. ನೀವು ನನ್ನ ತೆರೆ ಮೇಲಿನ ಮತ್ತು ತೆರೆ ಹಿಂದಿನ ಜೀವನವನ್ನು ಗಮನಿಸುತ್ತಾ ಬಂದಿದ್ದೀರಿ. ನಾನು ಯಾವಾಗಲೂ ಅಭಿಮಾನಿಗಳು ಮತ್ತು ಮಾಧ್ಯಮದವರ ಜೊತೆ ಪಾರದರ್ಶಕವಾಗಿ ನಡೆದುಕೊಳ್ಳಲು ಪ್ರಯತ್ನಿಸಿದ್ದೇನೆ. ಇಂದು ನಾನು ಭಾರವಾದ ಮನಸ್ಸಿನಿಂದ ವೈಯಕ್ತಿಕ ಜೀವನದ ಈ ವಿಷಯ ತಿಳಿಸುತ್ತಿದ್ದೇನೆ’ ಎಂದು ಜಯಂ ರವಿ ಅವರು ತಮ್ಮ ಬರಹ ಆರಂಭಿಸಿದ್ದಾರೆ. ಅಭಿಮಾನಿಗಳಿಗೆ ಮನರಂಜನೆ ನೀಡುವುದೇ ನನ್ನ ಮೊದಲ ಆದ್ಯತೆ ಆಗಿರುತ್ತದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿ ಆಗಿರುತ್ತೇನೆ. ನಿಮ್ಮ ಬೆಂಬಲವೇ ನನಗೆ ಸರ್ವಸ್ವ. ಈ ಎಲ್ಲ ವರ್ಷಗಳಲ್ಲಿ ನೀವು ನನಗೆ ನೀಡಿದ ಪ್ರೀತಿಗೆ ಚಿರಋಣಿ. ಅರ್ಥ ಮಾಡಿಕೊಂಡು ಬೆಂಬಲ ಮುಂದುವರಿಸಿದ್ದಕ್ಕೆ ಧನ್ಯವಾದಗಳು’ ಎಂದು ಜಯಂ ರವಿ ಅವರು ಬರಹ ಪೂರ್ಣಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



