ಸಿನಿಮಾ ಸುದ್ದಿ

ಆರ್ಮುಗಂ ರವಿಶಂಕರ್ ಪುತ್ರನಿಗೆ ಶಿವರಾಜ್ ಕುಮಾರ್ ಸಾಥ್: 'ಸುಬ್ರಹ್ಮಣ್ಯ' ಚಿತ್ರದ ಫಸ್ಟ್ ಲುಕ್ ರಿಲೀಸ್

ಗಣೇಶ ಚತುರ್ಥಿಯ ಶುಭ ದಿನದಂದು ಶಿವರಾಜ್ ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಆರ್ಮುಗಂ ರವಿಶಂಕರ್ ಪುತ್ರನಿಗೆ ಶಿವರಾಜ್ ಕುಮಾರ್ ಸಾಥ್: 'ಸುಬ್ರಹ್ಮಣ್ಯ' ಚಿತ್ರದ ಫಸ್ಟ್ ಲುಕ್ ರಿಲೀಸ್
ನಟ ಶಿವರಾಜ್ ಕುಮಾರ್ ಹಾಗೂ ಸುಬ್ರಹ್ಮಣ್ಯ ಚಿತ್ರದ ಸ್ಟಿಲ್
Published On :

ಖ್ಯಾತ ಖಳನಟ ಪಿ ರವಿಶಂಕರ್ ಅವರ ಪುತ್ರ ಅದ್ವೈ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಾಧ್ ನೀಡಿದ್ದು, ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಚಿತ್ರದ ಫಸ್ಟ್ ಲುಕ್'ನ್ನು ಬಿಡುಗಡೆ ಮಾಡಿದ್ದಾರೆ.

ಗಣೇಶ ಚತುರ್ಥಿಯ ಶುಭ ದಿನದಂದು ಶಿವರಾಜ್ ಕುಮಾರ್ ಅವರು ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಉದ್ದನೆಯ ಕೂದಲು ಬಿಟ್ಟು ವಿನ್ಯಾಸಗೊಳಿಸಲಾದ ಉಡುಪಿನಲ್ಲಿ ಸುಂದರವಾಗಿ ಹಾಗೂ ಸೊಗಸಾಗಿ ಅದ್ವೈ ಕಾಣಿಸಿಕೊಂಡಿದ್ದಾರೆ. ಕಾಡು, ನಿಗೂಢ ಪ್ರವೇಶ ದ್ವಾರ, ಅದ್ವೈನನ್ನು ಬೆನ್ನಟ್ಟಿರುವ ತಂಡ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಗಮನಸೆಳೆಯುತ್ತಿದೆ.

ಮೇಲ್ನೋಟಕ್ಕೆ 'ಸುಬ್ರಹ್ಮಣ್ಯ' ಸಿನಿಮಾ ಒಂದು ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾ ಎನಿಸುತ್ತಿದ್ದು, ಜೊತೆಗೆ ಅಡ್ವೆಂಚರ್ ಎಲಿಮೆಂಟ್ಸ್‌ ಕೂಡ ಸಿನಿಮಾದಲ್ಲಿ ಕಂಡು ಬಂದಿದೆ.

ಈಗಾಗಲೇ ಸಿನಿಮಾದ ಶೇ.60ರಷ್ಟು ಚಿತ್ರೀಕರಣ ಶೂಟಿಂಗ್ ಪೂರ್ಣಗೊಂಡಿದ್ದು. ಈಗಾಗಲೇ ಶೂಟಿಂಗ್ ಆಗಿರುವ ಸಿನಿಮಾದ ಗ್ರಾಫಿಕ್ಸ್ ಕೆಲಸಗಳು ಬೆಂಗಳೂರು, ಮುಂಬೈ, ಹೈದರಾಬಾದ್‌ ಹಾಗೂ ಚೆನ್ನೈನ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ನಡೆಯುತ್ತಿದೆ.

ಚಿತ್ರವನ್ನು ಎಸ್.ಜಿ ಮೂವಿ ಮೇಕರ್ಸ್ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ರವಿ ಬಸ್ರೂರ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ ಸಿನಿಮಾಗೆ ವಿಘ್ನೇಶ್ ರಾಜ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಎಂ ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಮಾಲಾಶ್ರೀ ಅಭಿನಯದ ದುರ್ಗಿ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ರವಿಶಂಕರ್​ ಅವರು ಈಗ ಮಗನ ಸಿನಿಮಾಗಾಗಿ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಬರೋಬ್ಬರಿ 2 ದಶಕದ ಬಳಿಕ ಅವರು ಡೈರೆಕ್ಟರ್​ ಕ್ಯಾಪ್​ ಧರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.