ಸಿನಿಮಾ ಸುದ್ದಿ

ಪುಷ್ಪ 2: ದೀಪಾವಳಿ ಹಬ್ಬಕ್ಕೆ ಹೊಸ ಫೋಸ್ಟರ್ ಬಿಡುಗಡೆ, ರೊಮ್ಯಾಂಟಿಕ್ ಲುಕ್‌ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!

ಫೋಸ್ಟರ್ ನಲ್ಲಿ ಅಲ್ಲು-ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಗಂಡ- ಹಂಡತಿ ಪಾತ್ರದಲ್ಲಿ ರೊಮ್ಯಾಂಟಿಕ್ ಲುಕ್ ನಲ್ಲಿದ್ದಾರೆ. ಪುಷ್ಪಾ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು.

ಪುಷ್ಪ 2: ದೀಪಾವಳಿ ಹಬ್ಬಕ್ಕೆ ಹೊಸ ಫೋಸ್ಟರ್ ಬಿಡುಗಡೆ, ರೊಮ್ಯಾಂಟಿಕ್ ಲುಕ್‌ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!
ಪುಷ್ಪ 2 ಹೊಸ ಫೋಸ್ಟರ್ ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ
Published On :

ದೀಪಾವಳಿಯ ಸಂದರ್ಭದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಚಿತ್ರ ಪುಷ್ಪ 2: ದಿ ರೈಸ್‌ನ ಹೊಸ ಪೋಸ್ಟರ್ ಬಿಡುಗಡೆ ಮೂಲಕ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಶ್ಮೀಕಾ ಮಂದಣ್ಣ, ತಮ್ಮ ಶ್ರೀವಲ್ಲಿ ಪಾತ್ರದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಫೋಸ್ಟರ್ ನಲ್ಲಿ ಅಲ್ಲು-ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಗಂಡ- ಹಂಡತಿ ಪಾತ್ರದಲ್ಲಿ ರೊಮ್ಯಾಂಟಿಕ್ ಲುಕ್ ನಲ್ಲಿದ್ದಾರೆ. ಪುಷ್ಪಾ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು.

'ನಿಮಗೂ, ನಿಮಗೂ ಕುಟುಂಬಕ್ಕೂ ಪುಷ್ಪ ರಾಜ್, ಶ್ರೀವಲ್ಲಿಯ ದೀಪಾವಳಿ ಶುಭಾಶಯಗಳು. Pushpa2 ಇದೇ ವರ್ಷ ಡಿಸೆಂಬರ್ 5 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಜ್ ಆಗಲಿದೆ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಕೂಡಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಿಸಿರುವ ಈ ಚಿತ್ರದಲ್ಲಿ ಅಲ್ಲು, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅವರು ಪುಷ್ಪ ರಾಜ್, ಶ್ರೀವಲ್ಲಿ ಮತ್ತು ಭನ್ವರ್ ಸಿಂಗ್ ಶೇಕಾವತ್ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ನಾಯಕ ನಟ ಅಲ್ಲು ಅರ್ಜುನ್, ಪುಷ್ಪ1 ರಲ್ಲಿನ ಅಮೋಘ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸುಕುಮಾರ್ ನಿರ್ದೇಶನದ ಪುಷ್ಪ2 ಚಿತ್ರವನ್ನು ಈ ಹಿಂದೆ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಬಳಿಕ ಜೂನ್ ನಲ್ಲಿ ರಿಲೀಸ್ ಎನ್ನಲಾಗಿತ್ತು. ತದನಂತರ ಡಿಸೆಂಬರ್ 6 ರಂದು ಬಿಡುಗಡೆ ಮಾಡಲಾಗುವುದು ಎಂದಿದ್ದ ನಿರ್ಮಾಪಕರು ಇದೀಗ ಇದು ಡಿಸೆಂಬರ್ 5 ರಂದು ಥಿಯೇಟರ್ ಗೆ ಬರಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.