ಸಿನಿಮಾ ಸುದ್ದಿ

ಸಸ್ಪೆನ್ಸ್ ಥ್ರಿಲ್ಲರ್ 'ನಾ ನಿನ್ನ ಬಿಡಲಾರೆ' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್!

ಟೀಸರ್​ ನಿಂದಲೇ ಗಮನ ಸೆಳೆಯುತ್ತಿರುವ ನಾನಿನ್ನ ಬಿಡಲಾರೆ ನವೆಂಬರ್‌ 29ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ. ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನು ರಾಜ್ಯದಾದ್ಯಂತ ವಿತರಿಸಲಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ 'ನಾ ನಿನ್ನ ಬಿಡಲಾರೆ' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್!
ನಾ ನಿನ್ನ ಬಿಡಲಾರೆ ಸಿನಿಮಾ ಸ್ಟಿಲ್
Published On :

ದಶಕಗಳ ಹಿಂದೆ ಅನಂತ್ ನಾಗ್-ಲಕ್ಷ್ಮೀ ಕಾಂಬಿನೇಷನ್​​ ನಲ್ಲಿ ಮೂಡಿ ಬಂದ ಚಿತ್ರ ನಾನಿನ್ನ ಬಿಡಲಾರೆ ಕನ್ನಡ ಸಿನಿರಸಿಕರ ಪಾಲಿಗೆ 'ಎವರ್ ಗ್ರೀನ್' ಸಿನಿಮಾ ಕೂಡಾ. ಇದೀಗ ಅದೇ ಟೈಟಲ್ ನೊಂದಿಗೆ ಹೊಸ ಚಿತ್ರತಂಡವೊಂದು ಪ್ರೇಕ್ಷಕರೆದುರು ಬರುತ್ತಿದೆ. ಈ ಕಾಲಕ್ಕೆ ತಕ್ಕ ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್ ಒಳಗೊಂಡು ಹೊಸ ತಂಡ ಹೊಸ ಆಯಾಮದಲ್ಲಿ ಕನ್ನಡ ಪ್ರೇಕ್ಷಕರಿಗೆ ಮನರಂಜನೆ ಒದಗಿಸಲು ಅಣಿಯಾಗುತ್ತಿದೆ. ಟೀಸರ್​ ನಿಂದಲೇ ಗಮನ ಸೆಳೆಯುತ್ತಿರುವ ನಾನಿನ್ನ ಬಿಡಲಾರೆ ನವೆಂಬರ್‌ 29ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ. ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನು ರಾಜ್ಯದಾದ್ಯಂತ ವಿತರಿಸಲಿದ್ದಾರೆ.

ರಿಲೀಸ್​ ಡೇಟ್ ಅನೌನ್ಸ್ ಮಾಡುವ ಮೂಲಕ ಟೈಟಲ್​, ಪೋಸ್ಟರ್, ಟೀಸರ್​ನಿಂದಲೇ ಕನ್ನಡ‌ ಸಿನಿಪ್ರಿಯರಲ್ಲಿ ಕೂತೂಹಲ ಮೂಡಿಸಿರುವ ನಾನಿನ್ನ ಬಿಡಲಾರೆ ತಂಡ ಪ್ರಚಾರ ಕಾರ್ಯ ಶುರು ಮಾಡಿಕೊಂಡಿದೆ. ಸದ್ಯದಲ್ಲೇ ಎರಡು ಹಾಡು ಹಾಗೂ ಥಿಯೇಟರಿಕಲ್ ಟ್ರೇಲರ್​​ ರಿಲೀಸ್ ಮಾಡೋ ಪ್ಲ್ಯಾನ್​ ನಡೆಯುತ್ತಿದೆ.

ಅಂಬಾಲಿ ಭಾರತಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದು ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ, ನಿರ್ಮಿಸಿರುವ ನಾ ನಿನ್ನ ಬಿಡಲಾರೆ ಚಿತ್ರವನ್ನು ನವೀನ್ ಜಿ.ಎಸ್. ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರುವ ಚಿತ್ರಕ್ಕೆ ದೀಪಕ್ ಜಿ.ಎಸ್. ಸಂಕಲನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.