ಸಿನಿಮಾ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ: ದೊಡ್ಮನೆಯಿಂದ ಹೊರದಬ್ಬಿಸಿಕೊಂಡ್ರಾ ರಂಜಿತ್ ಮತ್ತು ವಕೀಲ ಜಗದೀಶ್?

ವಕೀಲ ಜಗದೀಶ್‌ ಜೊತೆಗೆ ಮತ್ತೋರ್ವ ಸ್ಪರ್ಧಿಯೂ ಔಟ್ ಆಗಿದ್ದಾರಂತೆ. ಶನಿ ಸೀರಿಯಲ್‌ನ ಸೂರ್ಯದೇವ ಖ್ಯಾತಿಯ ರಂಜಿತ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ: ದೊಡ್ಮನೆಯಿಂದ ಹೊರದಬ್ಬಿಸಿಕೊಂಡ್ರಾ ರಂಜಿತ್ ಮತ್ತು ವಕೀಲ ಜಗದೀಶ್?
ರಂಜಿತ್ ಮತ್ತು ಜಗದೀಶ್
Published On :

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಮೂರನೇ ವಾರವೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ‘ಬಿಗ್ ಬಾಸ್‌’ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಸ್ಪರ್ಧಿಗಳ ತಾಳ್ಮೆ, ಸಹನೆಯ ಮಿತಿ ಮೀರಿದ ಪರಿಣಾಮ ಜಗದೀಶ್‌ ಹೊರಬಿದ್ದಿದ್ದಾರೆ ಎನ್ನಲಾಗಿದೆ. ವಕೀಲ ಜಗದೀಶ್‌ ಜೊತೆಗೆ ಮತ್ತೋರ್ವ ಸ್ಪರ್ಧಿಯೂ ಔಟ್ ಆಗಿದ್ದಾರಂತೆ.‘ಶನಿ’ ಸೀರಿಯಲ್‌ನ ಸೂರ್ಯದೇವ ಖ್ಯಾತಿಯ ರಂಜಿತ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಮತ್ತು ರಂಜಿತ್ ಮಧ್ಯೆ ಮಾರಾಮಾರಿ ನಡೆದಿದ್ಯಂತೆ. ಪರಿಣಾಮ, ರೂಲ್ಸ್ ಅನ್ವಯ ಇಬ್ಬರನ್ನೂ ಹೊರದಬ್ಬಲಾಗಿದೆ ಅಂತ ಹೇಳಲಾಗುತ್ತಿದೆ. ಶಿಶಿರ್ ಮನೆ ಕ್ಯಾಪ್ಟನ್ ಆದ ಕ್ಷಣದಿಂದ ಲಾಯರ್ ಜಗದೀಶ್ ಮೂಲೆ ಗುಂಪಾಗಿದ್ದರು.

ಇತರೆ ಸ್ಪರ್ಧಿಗಳ ಒಂದು ಗುಂಪು ಮಾಡಿಕೊಂಡು, ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಿದ್ದರು. ಎರಡು ಮೂರು ಸಲ ರಂಜಿತ್ ಕೂಡ ಪರೋಕ್ಷವಾಗಿ ಬೆದರಿಕೆ ಹಾಕಿದ್ದರು. ಮಾನಸ ಅವರ ವಿಚಾರದಲ್ಲಿ ಜಗದೀಶ್‌ ಅವರು ಮಧ್ಯ ಮಾತನಾಡಿದ ಸಂದರ್ಭದಲ್ಲಿ ರಂಜಿತ್‌, ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಹಲ್ಲೆ ಮಾಡುವವರೆಗೂ ಹೋಗಿದೆ. ಇಬ್ಬರು ಈ ಸಂದರ್ಭದಲ್ಲಿ ಹೊಡೆದಾಡಿಕೊಂಡಿದ್ದು, ನಿಯಮದ ಉಲ್ಲಂಘನೆ ಆದ ಕಾರಣ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

ಆದರೆ ರಂಜಿತ್ ಮತ್ತು ಜಗದೀಶ್ ಹೊರ ಬಂದಿರುವ ಫೋಟೋ ಅಥವಾ ವಿಡಿಯೋ ಸಾಕ್ಷಿಯೂ ಸಿಕ್ಕಿಲ್ಲ. ವಾಹಿನಿಯವರು ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ, ಹೀಗಾಗಿ ಹೊರಗಿನಿಂದ ಪಬ್ಲಿಸಿಟಿ ಸಿಗಬೇಕು ಎಂದು ಜಗದೀಶ್ ತಂಡದವರು ಈ ಗೇಮ್ ಪ್ಲ್ಯಾನ್ ಮಾಡಿರಬಹುದು ಎಂಬ ಗೊಂದಲವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.