ಸಿನಿಮಾ ಸುದ್ದಿ

'ಸ್ಯಾಂಡಲ್ ವುಡ್ ಕ್ವೀನ್' ಅಭಿಮಾನಿಗಳಿಗೆ ನಿರಾಸೆ: 'ಉತ್ತರಕಾಂಡ' ಚಿತ್ರದಿಂದ ನಟಿ ರಮ್ಯಾ ಔಟ್!

ನಟ ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸುತ್ತಿರುವ 'ಉತ್ತರಕಾಂಡ' ದಲ್ಲಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ನಾಯಕಿಯಾಗಿ ಚಂದನವನಕ್ಕೆ ಕಮ್ ಬ್ಯಾಕ್ ಮಾಡುವವರಿದ್ದರು.

'ಸ್ಯಾಂಡಲ್ ವುಡ್ ಕ್ವೀನ್' ಅಭಿಮಾನಿಗಳಿಗೆ ನಿರಾಸೆ: 'ಉತ್ತರಕಾಂಡ' ಚಿತ್ರದಿಂದ ನಟಿ ರಮ್ಯಾ ಔಟ್!
ನಟಿ ರಮ್ಯಾ(ಸಂಗ್ರಹ ಚಿತ್ರ)
Published On :

ನಟ ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸುತ್ತಿರುವ 'ಉತ್ತರಕಾಂಡ' ಚಿತ್ರ ಅಪಾರ ನಿರೀಕ್ಷೆ ಹುಟ್ಟಿಸಿದ ಚಿತ್ರವಾಗಿತ್ತು. ಕಾರಣ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಕಮ್ ಬ್ಯಾಕ್ ಮಾಡುವವರಿದ್ದರು.

ಚಿತ್ರದ ಮುಹೂರ್ತದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ ರಮ್ಯಾ ಸ್ಕ್ರಿಪ್ಟ್ ಬಹಳ ಸೊಗಸಾಗಿದೆ, ಚಿತ್ರತಂಡ ಕೂಡ ಅದ್ಭುತವಾಗಿದೆ, ಚಿಂದಿ ಉಡಾಯಿಸುವುದರಲ್ಲಿ ಸಂಶಯವಿಲ್ಲ ಎಂದಿದ್ದರು. ಹಲವು ವರ್ಷಗಳ ನಂತರ ರಮ್ಯಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ದೊಡ್ಡ ಪರದೆ ಮೇಲೆ ನೋಡುವ ತವಕದಲ್ಲಿದ್ದರು. ಆದರೆ ಈಗ ಅವರಿಗೆಲ್ಲ ನಿರಾಸೆಯಾಗಿದೆ. ರಮ್ಯಾ ಉತ್ತರಾಖಂಡ ಚಿತ್ರದಲ್ಲಿ ಕೂಡ ನಟಿಸುತ್ತಿಲ್ಲ. ಈ ಹಿಂದೆ ಅವರದೇ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ನಲ್ಲಿ ತಯಾರಾದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಕೂಡ ಆರಂಭದಲ್ಲಿ ನಟಿಸುತ್ತೇನೆ ಎಂದು ಹೇಳಿ ನಂತರ ಹಿಂದೆ ಸರಿದಿದ್ದರು.

ಚುನಾವಣಾ ಪ್ರಚಾರಕ್ಕೆ ಕೂಡ ಅಲಭ್ಯ: ನಿನ್ನೆ ಇನ್ಸ್ಟಾಗ್ರಾಮ್ ಮೂಲಕ ರಮ್ಯಾ ಅವರೇ ಉತ್ತರಾಖಂಡದಲ್ಲಿ ನಟಿಸುತ್ತಿಲ್ಲ. ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ, ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ರಮ್ಯಾ ಪ್ರಚಾರ ಮಾಡಲಿದ್ದಾರೆ ಎಂದು ಇತ್ತೀಚೆಗೆ ಕೇಳಿಬರುತ್ತಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.