VIP ಚಿತ್ರೀಕರಣ ಬಹುತೇಕ ಪೂರ್ಣ; ನಟ ವಸಿಷ್ಠ ಸಿಂಹ ಪಾತ್ರದ ಫಸ್ಟ್ ಲುಕ್ ಬಿಡುಗಡೆ
ನಿರ್ದೇಶಕ ಬ್ರಹ್ಮ ಜೊತೆಗಿನ ವಸಿಷ್ಠ ಸಿಂಹ ಅವರ ಮುಂಬರುವ ಚಿತ್ರವು ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇನ್ನು ಕೇವಲ ಎರಡು ಹಾಡುಗಳು ಮತ್ತು ಫೈಟ್ ಸೀಕ್ವೆನ್ಸ್ ಮಾತ್ರ ಉಳಿದಿದೆ. ಈಮಧ್ಯೆ, ವಸಿಷ್ಠ ಸಿಂಹ ಅವರ ಪಾತ್ರದ ಫಸ್ಟ್ ಲುಕ್ ಅನ್ನು ನಿರ್ಮಲಾನಂದ ಸ್ವಾಮೀಜಿ ಬಿಡುಗಡೆ ಮಾಡಿದ್ದಾರೆ.

ನಿರ್ದೇಶಕ ಬ್ರಹ್ಮ ಜೊತೆಗಿನ ವಸಿಷ್ಠ ಸಿಂಹ ಅವರ ಮುಂಬರುವ ಚಿತ್ರವು ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇನ್ನು ಕೇವಲ ಎರಡು ಹಾಡುಗಳು ಮತ್ತು ಫೈಟ್ ಸೀಕ್ವೆನ್ಸ್ ಮಾತ್ರ ಉಳಿದಿದೆ. ಈಮಧ್ಯೆ, ವಸಿಷ್ಠ ಸಿಂಹ ಅವರ ಪಾತ್ರದ ಫಸ್ಟ್ ಲುಕ್ ಅನ್ನು ನಿರ್ಮಲಾನಂದ ಸ್ವಾಮೀಜಿ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರವು ಆಕ್ಷನ್-ಪ್ಯಾಕ್ಡ್ ಡ್ರಾಮಾ ಆಗಿದ್ದು, ಸ್ಟಂಟ್ ಮಾಸ್ಟರ್‌ಗಳಾದ ಅರ್ಜುನ್ ಮತ್ತು ವಿಕ್ರಮ್ ಮೋರ್, ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ ಮತ್ತು ಶಿವ ಅವರು ಫೈಟ್ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ವರದಿ ಪ್ರಕಾರ, ನಟ ವಸಿಷ್ಠ ಅವರು ಪ್ರೊಫೆಸರ್ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ವಿಐಪಿ ಎಂದರೆ ಇದು 'ಪ್ರತೀಕಾರ ಪ್ರಗತಿಯಲ್ಲಿದೆ' (Vengeance in Progress) ಎಂದರ್ಥ. ಇದೊಂದು ಕ್ರೈಮ್ ಥ್ರಿಲ್ಲರ್ ಆಗಿದೆ ಎಂದು ಚಿತ್ರತಂಡ ತಿಳಿಸಿದೆ.

ವಿಐಪಿ ಚಿತ್ರವನ್ನು ಕಲಾಸೃಷ್ಟಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆರ್‌ಎಸ್ ಮೋಹನ್ ಕುಮಾರ್ ಮತ್ತು ಆರ್ ಅಚ್ಯುತ ರಾವ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಫ್ಜಲ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ತೇಜಸ್ವಿನಿ ಶರ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಇಂಗ್ಲಿಷ್ ಮಂಜ, ಮೇರಿ, ಮತ್ತು ಫ್ಲಾಟ್ ನಂ.9 ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನುಳಿದ ಪಾತ್ರವರ್ಗದಲ್ಲಿ ಬಾಲರಾಜವಾಡಿ, ಸುನಿಲ್ ಪುರಾಣಿಕ್ ಮತ್ತು ಸ್ಪರ್ಶ ರೇಖಾ ಇದ್ದಾರೆ. ವಿಐಪಿ ಚಿತ್ರಕ್ಕೆ ರಾಜೀವ್ ಗಣೇಶನ್ ಅವರ ಛಾಯಾಗ್ರಹಣ ಮತ್ತು ರಾಘವನ್ ಕಾರ್ತಿಕ್ ಅವರ ಸಂಗೀತವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



