ನೈಜ ಘಟನೆ ಆಧರಿತ ಮಹಿಳಾ ಪ್ರಧಾನ ‘ತಪಸ್ಸಿ’ ಚಿತ್ರದಲ್ಲಿ ನಟ ರವಿಚಂದ್ರನ್ ಪ್ರೊಫೆಸರ್ ಪಾತ್ರ
ಮಹಿಳಾ ಪ್ರಧಾನ ಚಿತ್ರವಾದ ತಪಸ್ಸಿಯಲ್ಲಿ ವಿ ರವಿಚಂದ್ರನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಸೆಟ್‌ಗೆ ಸೇರಿದ ಕ್ರೇಜಿ ಸ್ಟಾರ್ ಪ್ರಕಾರ, ಚಿತ್ರಕಥೆಯನ್ನು ತಾವೇ ಬರೆದಿರುವ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರ ಒತ್ತಾಯದ ಮೇರೆಗೆ ಅವರು ಈ ಪಾತ್ರವನ್ನು ಆರಿಸಿಕೊಂಡಿದ್ದಾರೆ ಹೇಳುತ್ತಾರೆ.

ಮಹಿಳಾ ಪ್ರಧಾನ ಚಿತ್ರವಾದ ತಪಸ್ಸಿಯಲ್ಲಿ ವಿ ರವಿಚಂದ್ರನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಸೆಟ್‌ಗೆ ಸೇರಿದ ಕ್ರೇಜಿ ಸ್ಟಾರ್ ಪ್ರಕಾರ, ಚಿತ್ರಕಥೆಯನ್ನು ತಾವೇ ಬರೆದಿರುವ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರ ಒತ್ತಾಯದ ಮೇರೆಗೆ ಅವರು ಈ ಪಾತ್ರವನ್ನು ಆರಿಸಿಕೊಂಡಿದ್ದಾರೆ ಹೇಳುತ್ತಾರೆ.
ಮ್ಯಾಥ್ಯೂ ಅವರು ಈ ಹಿಂದೆ ಗಿರೀಶ್ ಕಾರ್ನಾಡ್ ಅಭಿನಯದ ಸ್ವೀಟ್ ಪಾಯಿಸನ್ ಚಿತ್ರವನ್ನು ನಿರ್ದೇಶಿಸಿದ್ದರು. ತಪಸ್ಸಿ ಚಿತ್ರವು ಅವರ ಎರಡನೇ ಪ್ರಯತ್ನವಾಗಿದೆ. ನೈಜ ಘಟನೆ ಆಧರಿಸಿದ ತಪಸ್ಸಿ ಚಿತ್ರದಲ್ಲಿ ಅಮೈರಾ ಗೋಸ್ವಾಮಿ ನಟಿಸಿದ್ದಾರೆ. ಅವರು ಈ ಹಿಂದೆ ಮಲಯಾಳಂ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಇದೀಗ ತಪಸ್ಸಿಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
'ತಂಡವು ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಈಗ ನನ್ನ ಭಾಗದ ಶೂಟಿಂಗ್ ಮಾತ್ರ ಬಾಕಿಯಿದೆ. ನಾನು ರವಿ ಬೋಪಣ್ಣ ಸಿನಿಮಾ ನಿರ್ದೇಶಿಸುತ್ತಿದ್ದ ಸಮಯದಿಂದಲೂ ಮ್ಯಾಥ್ಯೂ ನನಗೆ ಪರಿಚಿತರು ಮತ್ತು ಅವರು ನನಗೆ ಆತ್ಮೀಯ ಸ್ನೇಹಿತರಾಗಿದ್ದಾರೆ. ನಾನು ಈ ಸಿನಿಮಾದ ಭಾಗವಾಗಲು ನನಗೆ ಸಂತೋಷವಾಗಿದೆ' ಎಂದು ಪ್ರೊಫೆಸರ್ ಆಗಿ ನಟಿಸಿರುವ ರವಿಚಂದ್ರನ್ ಹೇಳುತ್ತಾರೆ.
'ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನನ್ನ ಪಾತ್ರವು ಸಾಮಾಜಿಕ ಸಂದೇಶವನ್ನು ನೀಡುತ್ತದೆ. ನನ್ನ ಪಾತ್ರವು ಚಿತ್ರಕ್ಕೆ ತೂಕವನ್ನು ತರುತ್ತದೆ ಮತ್ತು ನಾನು ಚಿತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂದು ನಂಬಿ ಅವರು ನನ್ನನ್ನು ಈ ಪಾತ್ರಕ್ಕೆ ಆಯ್ಕೆಮಾಡಿದ್ದಾರೆ' ಎಂದು ಅವರು ಹೇಳುತ್ತಾರೆ.
ನಿರ್ದೇಶಕ ಮ್ಯಾಥ್ಯೂ ಮಾತನಾಡಿ, 'ನಾನು ತಪಸ್ಸಿಯನ್ನು ಮಾಡಲು ಯೋಚಿಸಿದಾಗ ರವಿಚಂದ್ರನ್ ಅವರೇ ನನ್ನ ಮನಸ್ಸಿಗೆ ಬಂದರು ಮತ್ತು ಅವರು ಈ ಪಾತ್ರವನ್ನು ನಿರ್ವಹಿಸಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.
ತಪಸ್ಸಿಯಲ್ಲಿ ವಿನಯ್ ಪ್ರಸಾದ್, ಪ್ರಜ್ವಲ್, ಸಚಿನ್, ಅನುಷಾ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವೀರೇಶ್ ಅವರು ಕ್ಯಾಮೆರಾ ನಿರ್ವಹಿಸುತ್ತಿದ್ದು, ಅರುಣ್ ಪಿ ಥಾಮಸ್ ಸಂಕಲನ ಮತ್ತು ಆರವ್ ರಿಷಿಕ್ ಸಂಗೀತ ಸಂಯೋಜಕರಾಗಿದ್ದಾರೆ.
ಸ್ಪೆನ್ಸರ್ ಮ್ಯಾಥ್ಯೂ ಅವರು ನಿರ್ದೆಶನದ ಜೊತೆಗೆ ಬೆಂಗಳೂರು ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಆರ್ ಗಂಗಾಧರ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ತಪಸ್ಸಿ ಚಿತ್ರದ ಶೂಟಿಂಗ್ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



