ಸೆಟ್ಟೇರಿದ ‘ಬಿಲ್ಲಾರಿ’: ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಔಟ್, ಬಹುಪಾತ್ರಗಳಲ್ಲಿ ರಿಶ್ವಿಕ್ ಶೆಟ್ಟಿ ಮಿಂಚು
ಬಿಲ್ಸ್ ಬುಡಕಟ್ಟು ಜನಾಂಗದ ರಾಜನ ಐತಿಹಾಸಿಕ ಸೆಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದೆ. ಭಾರತದಲ್ಲಿ ಇವರುಗಳು ಹನ್ನೊಂದು ಲಕ್ಷ ಜನಸಂಖ್ಯೆ ಇರಲಿದ್ದು, ಹೆಚ್ಚಿನ ಭಾಗ ಗುಜರಾತ್, ರಾಜಸ್ಥಾನದಲ್ಲಿ ವಾಸವಾಗಿದ್ದಾರೆ.

ಪಿಎಲ್ ಭರಮಣ್ಣ ನಿರ್ದೇಶನದ, ಎವಿಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಿಶ್ವಿಕ್ ಶೆಟ್ಟಿ ನಾಯಕ ನಟ, ಬರಹಗಾರ ಮತ್ತು ನಿರ್ಮಾಪಕರಾಗಿ ನಿರ್ಮಿಸುತ್ತಿರುವ ಬಿಲ್ಲಾರಿ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ.
ಎವಿಕೆ ಪ್ರೊಡಕ್ಷನ್ ಅಡಿಯಲ್ಲಿ ರಿಶ್ವಿಕ್‌ಶೆಟ್ಟಿ ಕತೆ ಬರೆದು ನಿರ್ಮಾಣ ಮಾಡುವುದರ ಜೊತೆಗೆ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಗೋಕಾಕ್ ಮೂಲದ ಪಿ ಎಲ್ ಭರಮಣ್ಣ ಚಿತ್ರಕತೆ-ನಿರ್ದೆಶನದ ಜವಬ್ದಾರಿ ನಿರ್ವಹಿಸುತ್ತಿದ್ದಾರೆ. ಶಿಲ್ಪಗೌಡ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು, ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಭರಮಣ್ಣ, ಇದೊಂದು ಕಾಲ್ಪನಿಕ ಅಂಶಗಳನ್ನು ಒಳಗೊಂಡಿದೆ. ನಿಘಂಟುದಲ್ಲಿ ಬಿಲ್ಲಾರಿಗೆ ಬೇರೆ ಅರ್ಥ ಇರಲಿದೆ. ಆದರೆ ನಮ್ಮ ಸಿನಿಮಾದಲ್ಲಿ ಪಾತ್ರದ ಹೆಸರು ಶೀರ್ಷಿಕೆಯಾಗಿದೆ.
ಬಿಲ್ಸ್ ಬುಡಕಟ್ಟು ಜನಾಂಗದ ರಾಜನ ಐತಿಹಾಸಿಕ ಸೆಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದೆ. ಭಾರತದಲ್ಲಿ ಇವರುಗಳು ಹನ್ನೊಂದು ಲಕ್ಷ ಜನಸಂಖ್ಯೆ ಇರಲಿದ್ದು, ಹೆಚ್ಚಿನ ಭಾಗ ಗುಜರಾತ್, ರಾಜಸ್ಥಾನದಲ್ಲಿ ವಾಸವಾಗಿದ್ದಾರೆ. ಬೆಂಗಳೂರು, ಅರಸಿಕೆರೆ, ಹಾಸನ, ಅಣ್ಣಿಗೇರಿ, ಗಜೇಂದ್ರಗಡ, ಯಾಣ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಕ್ಲೈಮಾಕ್ಸ್‌ದಲ್ಲಿ ಸಿದ್ದಾಂತದೊಂದಿಗೆ ಭಾಗ-2 ಬರಲಿದೆ ಎಂಬುದಾಗಿ ತೋರಿಸಲಾಗುವುದು. ಇನ್ನು ಹೆಚ್ಚಿನ ವಿವರ ನೀಡಿದರೆ, ಸಿನಿಮಾದ ಹೂರಣ ಬಿಟ್ಟುಕೊಟ್ಟಂತೆ ಆಗುತ್ತದೆಂದು ಕುತೂಹಲ ಕಾಯ್ದಿರಿಸಿದರು.
ಇನ್ನು, ರಿಶ್ವಿಕ್‌ಶೆಟ್ಟಿ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲಿದ್ದು, ಚಿತ್ರದಲ್ಲಿ ರಾಜ ಮತ್ತು ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಭಟ್ಟರ ಮಗಳಾಗಿ ಮೈಸೂರು ಕಡೆಯವರಾದ ಚೈತ್ರಾ ಲೋಕನಾಥ್ ಬಣ್ಣ ಹಚ್ಚಲಿದ್ದಾರೆ.
ಉಳಿದಂತೆ ನಾಗೇಂದ್ರಅರಸ್, ಪ್ರಕಾಶ್ ತುಮ್ಮಿನಾಡು, ಎಂಕೆ ಮಠ, ಕೆಂಪೆಗೌಡ, ಬಲರಾಮ್ ಪಂಚಾಲ್, ಮಜಾಭಾರತದ ಚಂದ್ರಪ್ರಭಾ, ಕಾಂತಾರ ಖ್ಯಾತಿಯ ನವೀನ್ ಬೊಂದೆಲ್ ಸಂಭಾಷಣೆ ಹಾಗೂ ನಟನೆ ಮಾಡಲಿದ್ದು ಇವರೊಂದಿಗೆ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಇನ್ನು, ನಾಲ್ಕು ಹಾಡುಗಳ ಪೈಕಿ, ಒಂದು ಗೀತೆಗೆ ಪ್ರಮೋದ್ ಮರವಂತೆ ರಚಿಸಿದ್ದಾರೆ. ಸಂಗೀತ ಸುಭಾಷ್, ಛಾಯಾಗ್ರಹಣ ಅಗಸ್ತ್ಯ ಯು ಗೌಡ, ಕಲೆ ತಿರುಪತಿ ಅವರದಾಗಿದ್ದು, ತಂತ್ರಜ್ಘರ ಆಯ್ಕೆ ಬಾಕಿ ಇದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



