90ರ ದಶಕದ ಪ್ರಣಯದ ಕಥೆ ಹೇಳುವ ವಿಶಿಷ್ಟ ಸಿನಿಮಾ 'ವಿಷ್ಣುಪ್ರಿಯ'
1990 ರ ಪ್ರಣಯದ ಕಥೆಯನ್ನು ಹೇಳುವ ವಿಷ್ಣುಪ್ರಿಯಾ ಸಿನಿಮಾ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಸಿನಿಮಾ ತಂಡ ಮೊದಲ ಹಾಡನ್ನು ಅನಾವರಣ ಮಾಡಿದೆ.

1990 ರ ಪ್ರಣಯದ ಕಥೆಯನ್ನು ಹೇಳುವ ವಿಷ್ಣುಪ್ರಿಯಾ ಸಿನಿಮಾ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಸಿನಿಮಾ ತಂಡ ಮೊದಲ ಹಾಡನ್ನು ಅನಾವರಣ ಮಾಡಿದೆ.
ಪಡ್ಡೆ ಹುಲಿ ಸಿನಿಮಾದ ನಟ ಶ್ರೇಯಸ್ ಮಂಜು ಈ ಸಿನಿಮಾದಲ್ಲಿ ಪ್ರೇಮಿ ವಿಷ್ಣುವಿನ ಪಾತ್ರದಲ್ಲಿ ನಟಿಸಿದ್ದರೆ, ಪ್ರಿಯ ಪಾತ್ರದಲ್ಲಿ ಪ್ರಿಯಾ ವಾರಿಯರ್ ನಟಿಸಿದ್ದಾರೆ. ಈ ತೀವ್ರ ಪ್ರೇಮಕಥೆಯನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದು ಚಿತ್ರ ತಂಡ ಮೊದಲ ಹಾಡನ್ನು ಬಿಡುಗಡೆಗೊಳಿಸಿದೆ. ಬಿಡುಗಡೆ ಸಮಾರಂಭದಲ್ಲಿ ದಯಾಳ್ ಪದ್ಮನಾಭನ್ ಜೊತೆಗೆ ನಟರಾದ ಶರಣ್ ಮತ್ತು ರುಕ್ಮಿಣಿ ವಸಂತ್ ಉಪಸ್ಥಿತರಿದ್ದರು.
ಚಿಗುರು ಚಿಗುರು ಸಮಯ ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರ ಸಂಯೋಜನೆ ಇದೆ. ಶ್ರೇಯಸ್ ಪ್ರಕಾರ, ಈ ಹಾಡು ಚಿತ್ರದ ಥೀಮ್ ನ್ನು ಪ್ರತಿಬಿಂಬಿಸುತ್ತದೆ.
ಇಂದಿನ ಸಿನಿಮಾದಲ್ಲಿ 90 ರ ದಶಕದ ಚಿತ್ರ ಸೆಟ್ ನ್ನು ಪ್ರಸ್ತುತಪಡಿಸುವುದು ಬಹಳ ಅಪರೂಪ, ಮತ್ತೊಂದು ವಿಶೇಷ ಸಂಗತಿಯೆಂದರೆ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಆಗಿದೆ. ನಿರ್ಮಾಪಕ ಕೆ ಮಂಜು ಇಡೀ ಚಲನಚಿತ್ರ ತಂಡ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಶಿವರಾತ್ರಿ ವೇಳೆ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ ಮತ್ತು ನಿಹಾಲ್ ರಾಜ್ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


