'ರಂಗಿತರಂಗ' ನಂತರ ಮತ್ತೆ ಜೊತೆಯಾದ ನಿರೂಪ್ ಭಂಡಾರಿ - ಸಾಯಿಕುಮಾರ್!
ಪೋಸ್ಟ್ ಮಾಸ್ಟರ್ ಮತ್ತು ರಂಗಿತರಂಗದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ಸಾಯಿಕುಮಾರ್, ಇನ್ನೂ ಹೆಸರಿಡದ ಈ ಯೋಜನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

2015 ರಲ್ಲಿ ಅನುಪ್ ಭಂಡಾರಿ ನಿರ್ದೇಶನದ ರಂಗಿತರಂಗ ಸಿನಿಮಾದಲ್ಲಿ ನಿರೂಪ್ ಭಂಡಾರಿ ಮತ್ತು ಸಾಯಿಕುಮಾರ್ ನಟಿಸಿದ್ದರು. ಆ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಇದೀಗ, ಸಚಿನ್ ವಾಲಿ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಇಬ್ಬರೂ ಮತ್ತೆ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ.
ಪೋಸ್ಟ್ ಮಾಸ್ಟರ್ ಮತ್ತು ರಂಗಿತರಂಗದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ಸಾಯಿಕುಮಾರ್, ಇನ್ನೂ ಹೆಸರಿಡದ ಈ ಯೋಜನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಪಾತ್ರಗಳ ವಿವರಗಳು ಮತ್ತು ಶೀರ್ಷಿಕೆಯನ್ನು ತಯಾರಕರು ಮುಚ್ಚಿಟ್ಟಿದ್ದಾರೆ. ಫೆಬ್ರವರಿ 6 ರಂದು ಫಸ್ಟ್ ಲುಕ್ ಜೊತೆಗೆ ಅವುಗಳನ್ನು ಅನಾವರಣಗೊಳಿಸಲು ನಿರ್ಧರಿಸಿದ್ದಾರೆ.
ಸದ್ಯ ಸಿನಿಮಾ ಶೂಟಿಂಗ್ ಹಂತದಲ್ಲಿದೆ, ಚಿತ್ರವು ನೈಜತೆ ಮತ್ತು ಕಾಲ್ಪನಿಕ ಕಥೆಗಳ ಆಕರ್ಷಕ ಸಮ್ಮಿಲ ಹೊಂದಿದೆ, ಸಾಮಾಜಿಕ ಸಂಪರ್ಕಗಳು, ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ವಿಷಯಗಳನ್ನು ಒಳಗೊಂಡಿದೆ. ಬೃಂದಾ ಆಚಾರ್ಯ ಮತ್ತು ಅಂಕಿತಾ ಅಮರ್ ನಟಿಸಿದ್ದಾರೆ. ಮೊದಲ ಬಾರಿಗೆ ನಿರೂಪ್ ಭಂಡಾರಿ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಅಂಕಿತ್ ಸೋನಿಗಾರ ನಿರ್ಮಿಸಿದ್ದು, ಪ್ರಶಾಂತ್ ಮುಳಗೆ ಸಹ ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ಉಲ್ಲಾಸ್ ಹೈದೂರ್ ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


