ಬಹುಭಾಷೆಗಳಲ್ಲಿ 5 ಸಿನಿಮಾ ಒಟ್ಟಿಗೆ ಘೋಷಣೆ; ಅಚ್ಚರಿ ಮೂಡಿಸಿದ ನಿರ್ದೇಶಕ ಆರ್ ಚಂದ್ರು!
ತಾಜ್ ಮಹಲ್, ಪ್ರೇಮ್ ಕಹಾನಿ, ಮೈಲಾರಿ, ಮತ್ತು ಚಾರ್ಮಿನಾರ್ ಐಲವ್ ಯೂ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಆರ್ ಚಂದ್ರು, ಕಬ್ಜಾ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಬದಲಾಗಿದ್ದಾರೆ

ತಾಜ್ ಮಹಲ್, ಪ್ರೇಮ್ ಕಹಾನಿ, ಮೈಲಾರಿ, ಮತ್ತು ಚಾರ್ಮಿನಾರ್ ಐಲವ್ ಯೂ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಆರ್ ಚಂದ್ರು, ಕಬ್ಜಾ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಬದಲಾಗಿದ್ದಾರೆ.
ತಮ್ಮ ವ್ಯಾಪ್ತಿ ವಿಸ್ತರಿಸಲು ನಿರ್ಧರಿಸಿರುವ ಚಂದ್ರು, ಹೊಸ ಬ್ಯಾನರ್ ಪ್ರಾರಂಭಿಸುತ್ತಿದ್ದಾರೆ, ಆರ್‌ಸಿ ಸ್ಟುಡಿಯೋಸ್ ಪ್ರೊಡಕ್ಷನ್ ಕಂಪನಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ವೇಳೆ ನಿರ್ಮಾಪಕ ಆನಂದ್ ಪಂಡಿತ್, ಅಲಂಕಾರಪಾಂಡಿಯನ್, ಹೆಚ್ ಎಂ ರೇವಣ್ಣ, ಉಪೇಂದ್ರ, ಕೃಷ್ಣ, ಜಾಕ್ ಮಂಜು, ಎನ್ ಎಂ ಸುರೇಶ್ ಉಪಸ್ಥಿತರಿದ್ದರು.
‘ಕಬ್ಜ’ಸಿನಿಮಾ ಮೂಲಕ ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ದೊಡ್ಡ ಗೆಲುವು ಸಂಪಾದಿಸಿರುವ ಆರ್ ಚಂದ್ರು ಇದೀಗ ದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಎಲ್ಲರೂ ಆಶ್ಚರ್ಯಪಡುವಂತೆ ಒಂದೇ ಬಾರಿ ಬರೋಬ್ಬರಿ ಐದು ಸಿನಿಮಾಗಳನ್ನು ತಮ್ಮ ಸಂಸ್ಥೆಯಿಂದ ಘೋಷಣೆ ಮಾಡಿದ್ದಾರೆ. ಐದು ಸಿನಿಮಾಗಳಲ್ಲಿ ಎಲ್ಲವನ್ನೂ ಆರ್ ಚಂದ್ರ ನಿರ್ದೇಶನ ಮಾಡುತ್ತಿಲ್ಲ. ಕೆಲವು ಹೊಸ ನಿರ್ದೇಶಕರಿಗೆ, ಹೊಸ ನಟರಿಗೆ ತಮ್ಮ ಈ ಸಿನಿಮಾಗಳಲ್ಲಿ ಅವಕಾಶ ನೀಡಲಿದ್ದಾರೆ.
ಫಾದರ್, ಪಿಓಕೆ, ಶ್ರೀರಾಮಬಾಣ ಚರಿತ, ಡಾಗ್, ಕಬ್ಜ 2 ಸಿನಿಮಾಗಳನ್ನು ಆರ್.ಚಂದ್ರು ಘೋಷಣೆ ಮಾಡಿದ್ದಾರೆ. "ನಾನು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಕಬ್ಜಾ 2 ನಿರ್ದೇಶನ ಮಾಡುತ್ತೇನೆ ಎಂದು ಚಂದ್ರು ಹೇಳಿದ್ದಾರೆ. "ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಐದು ಚಲನಚಿತ್ರಗಳನ್ನು ಪ್ರಾರಂಭಿಸುವುದು ಹೆಮ್ಮೆಯ ಕ್ಷಣ ಎಂದಿದ್ದಾರೆ.
ಈ ಹಿಂದೆ ಸುದೀಪ್ ಅವರೊಂದಿಗೆ ಒಂದು ಸಿನಿಮಾ ಘೋಷಿಸಿದ್ದೆ, ಈ ಐದು ಚಲನಚಿತ್ರಗಳ ಪೈಕಿ ಒಂದು ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ. ಸಿನಿಮಾ ಪ್ರಾರಂಭವಾದಾಗ ವಿವರಗಳು ಅಧಿಕೃತವಾಗಿ ನೀಡಲಾಗುವುದು ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪೇಂದ್ರ ಮತ್ತು ಡಾರ್ಲಿಂಗ್ ಕೃಷ್ಣ ಕೂಡ ಉಪಸ್ಥಿತರಿದ್ದರು, ಅವರು ಪ್ರಾಜೆಕ್ಟ್ ಒಂದರಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿರ್ದೇಶನ ಅಥವಾ ಪ್ರೊಡಕ್ಷನ್ ಹೌಸ್ ಯಾವುದರ ಬಗ್ಗೆ ಹೆಚ್ಚು ಗಮನವಹಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರು ನಿನ್ನೆಯವರೆಗೂ ನಾನು ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದೆ, ಆದರೆ ಇಂದು ನನ್ನ ಬಳಿ ವ್ಯವಸ್ಥಿತ ತಂಡವಿದೆ, ನನ್ನ ಗಮನವು ಪ್ರಾಥಮಿಕವಾಗಿ ನಿರ್ದೇಶನದ ಮೇಲೆ ಇರುತ್ತದೆ, ಆದರೆ ನಾನು ವಿವಿಧ ಸ್ಕ್ರಿಪ್ಟ್‌ಗಳನ್ನು ನೋಡುವ ತಂಡದ ಭಾಗವಾಗಿರುತ್ತೇನೆ. ಹತ್ತೂವರೆ ತಿಂಗಳ ನಂತರ ಮತ್ತೆ ನಾನು ಕಬ್ಜ -2 ಮಾಡಲು ಉಲ್ಲಾಸಿತನಾಗಿದ್ದೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


