ಸಿನಿಮಾ ಸುದ್ದಿ

'ಇವತ್ತು ಇವಳು, ನಾಳೆ ಅವಳು'; ನಟ ದರ್ಶನ್ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಲೇ ಇವೆ. ನಿರ್ಮಾಪಕ ಉಮಾಪತಿ ಗೌಡ ಹಾಗೂ ದರ್ಶನ್ ನಡುವಿನ ಕಾಟೇರ ಚಿತ್ರದ ಟೈಟಲ್ ಜಟಾಪಟಿ ನಡುವೆ ಇದೀಗ ದರ್ಶನ್ ವಿರುದ್ಧ ಗೌಡತಿಯರ ಸೇನೆ ಸಿಡಿದೆದ್ದಿದೆ.

'ಇವತ್ತು ಇವಳು, ನಾಳೆ ಅವಳು'; ನಟ ದರ್ಶನ್ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ!
ದರ್ಶನ್
Published On :

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಲೇ ಇವೆ. ನಿರ್ಮಾಪಕ ಉಮಾಪತಿ ಗೌಡ ಹಾಗೂ ದರ್ಶನ್ ನಡುವಿನ ಕಾಟೇರ ಚಿತ್ರದ ಟೈಟಲ್ ಜಟಾಪಟಿ ನಡುವೆ ಇದೀಗ ದರ್ಶನ್ ವಿರುದ್ಧ ಗೌಡತಿಯರ ಸೇನೆ ಸಿಡಿದೆದ್ದಿದೆ.

ದರ್ಶನ್ ರ 25 ವರ್ಷದ ಸಿನಿ ಪಯಣದ ಕುರಿತಂತೆ ನಡೆದ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ನಟ ದರ್ಶನ್ ವೇದಿಕೆ ಮೇಲೆ ಮಹಿಳೆಯರ ಬಗ್ಗೆ ಆಡಿದ ಮಾತುಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇವತ್ತು ಇವಳು, ನಾಳೆ ಅವಳು ಎಂದು ಹೇಳಿದ್ದ ದರ್ಶನ್ ವಿರುದ್ಧ ಗೌಡತಿಯರ ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ದರ್ಶನ್ ಅವರು ಈ ರೀತಿ ಉಡಾಫೆ ಆಗಿ ಮಾತನಾಡುವ ಅವಶ್ಯಕತೆ ಏನಿತ್ತು? ಈ ರೀತಿ ಮಾತುಗಳನ್ನು ನಾವು ಏಕೆ ಕೇಳಬೇಕು. ಈ ರೀತಿಯ ಮಾತುಗಳನ್ನು ದರ್ಶನ್ ಏಕೆ ಹೇಳಬೇಕಿತ್ತು ಎಂಬ ಬಗ್ಗೆ ವಿವರಣೆ ನೀಡಬೇಕು. ಅಲ್ಲದೆ ಹೆಣ್ಣುಮಕ್ಕಳ ಬಳಿ ಕ್ಷಮೆ ಕೇಳಬೇಕು ಎಂದು ಗೌಡತಿಯರ ಸೇನೆ ಆಗ್ರಹಿಸಿದೆ.

ಇನ್ನು ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಗೌಡತಿಯರ ಸೇನೆ, ಈ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಲೀಸಾಗಿ ಹರಿದಾಡುತ್ತಿದ್ದು ಯುವ ಜನತೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಹೆಣ್ಣು ಮಕ್ಕಳ ಬಗೆಗಿನ ಅವರ ದೃಷ್ಟಿಕೋನ ಬದಲಾಗಬಹುದು. ದರ್ಶನ್​ ಸಂಪೂರ್ಣ ಬದಲಾಗಬೇಕು. ಹೆಣ್ಣು ಮಕ್ಕಳನ್ನು ತೆರೆಯಮೇಲೆ ಗೌರವಿಸಿದಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಲು ಸಿದ್ಧ ಇದ್ದೇವೆ. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ದೂರಿನಲ್ಲಿ ನಮೂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.