ನಟ ಅಜಯ್ ರಾವ್‌ಗೆ ಕೊನೆ ಸಂದೇಶ ಕಳುಹಿಸಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್, ಏನು ಹೇಳಿದ್ದರೂ?
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿತ್ತು. ಇನ್ನು ನಿರ್ಮಾಪಕನ ಸಾವಿಗೆ ಚಿತ್ರರಂಗ ಕಂಬನಿ ಮುಡಿದಿದೆ.

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿತ್ತು. ಇನ್ನು ನಿರ್ಮಾಪಕನ ಸಾವಿಗೆ ಚಿತ್ರರಂಗ ಕಂಬನಿ ಮುಡಿದಿದೆ.
ಸ್ಯಾಂಡಲ್‌ವುಡ್ ಗಣ್ಯರು ಜಗದೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ಕೈನೋವಿದ್ದರೂ ನಟ ದರ್ಶನ್ ಆಪ್ತ ಸ್ನೇಹಿತ ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದರು.
ಉಪೇಂದ್ರ, ಪ್ರಿಯಾಂಕ ಉಪೇಂದ್ರ, ನಟಿ ಅಮೂಲ್ಯ, ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್, ಲವ್ಲಿ ಸ್ಟಾರ್ ಪ್ರೇಮ್, ಗುರುಕಿರಣ್ ದಂಪತಿ, ನಟ ಗುರುನಂದನ್ ಸೇರಿದಂತೆ ಅನೇಕರು ಸೌಂದರ್ಯ ಜಗದೀಶ್‌ಗೆ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಜೇಯ್ ರಾವ್ ಹೇಳಿದ್ದೇನು?
ಮತ್ತೊಂದೆಡೆ ನಟ ಅಜೇಯ ರಾವ್ ಅವರ ಮನೆ ಗೃಹ ಪ್ರವೇಶ ಸಮಾರಂಭ ಇಂದು ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅಜೇಯ್ ರಾವ್ ಸೌಂದರ್ಯ ಜಗದೀಶ್ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ನಾನು ಅವರಿಗೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆದರೆ ಇಂದು ಕೆಟ್ಟ ಸುದ್ದಿ ಕೇಳಬೇಕಾಯಿತು. ಮೂರು ದಿನಗಳ ಹಿಂದೆ ನನಗೆ ಮೇಸೆಜ್ ಮಾಡಿದ್ದರು. ದೇವರು ಒಳ್ಳೆದು ಮಾಡಲಿ, ನಾನು ಗೃಹ ಪ್ರವೇಶಕ್ಕೆ ಬರುತ್ತೀನಿ ಅಂತ ಮೇಸೆಜ್ ಮಾಡಿದ್ದರು. ಆದರೆ ಈ ಸುದ್ದಿ ಕೇಳಿ ತುಂಬಾ ಶಾಕ್ ಆಯಿತು ಎಂದು ಅಜೇಯ್ ರಾವ್ ಹೇಳಿದ್ದಾರೆ.
ಏ.15ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಡೆಯಲಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಾಳೆ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



