ಸಿನಿಮಾ ಸುದ್ದಿ

ಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ಬಹುಭಾಷಾ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್

ಆರ್‌ಸಿ ಸ್ಟುಡಿಯೋಸ್ ಇತ್ತೀಚೆಗಷ್ಟೇ ಇನ್ವೆನಿಯೊ ಒರಿಜಿನ್ ಕಂಪನಿಯ ಅಲಂಕಾರ್ ಪಾಂಡಿಯನ್ ಮತ್ತು ಉದ್ಯಮಿ ಸೀಕಲ್ ರಾಮಚಂದ್ರ ಗೌಡ ಅವರ ಸಹಯೋಗದಲ್ಲಿ ಆರ್ ಚಂದ್ರು ಅವರ ಬ್ಯಾನರ್ ಅಡಿಯಲ್ಲಿ ಐದು ಸಿನಿಮಾಗಳನ್ನು ಬ್ಯಾಂಕ್‌ರೋಲ್ ಮಾಡುವುದಾಗಿ ಘೋಷಿಸಿದೆ.

ಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ಬಹುಭಾಷಾ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್
ನಟ ಶಿವರಾಜ್‌ಕುಮಾರ್
Published On :

ಆರ್‌ಸಿ ಸ್ಟುಡಿಯೋಸ್ ಇತ್ತೀಚೆಗಷ್ಟೇ ಇನ್ವೆನಿಯೊ ಒರಿಜಿನ್ ಕಂಪನಿಯ ಅಲಂಕಾರ್ ಪಾಂಡಿಯನ್ ಮತ್ತು ಉದ್ಯಮಿ ಸೀಕಲ್ ರಾಮಚಂದ್ರ ಗೌಡ ಅವರ ಸಹಯೋಗದಲ್ಲಿ ಆರ್ ಚಂದ್ರು ಅವರ ಬ್ಯಾನರ್ ಅಡಿಯಲ್ಲಿ ಐದು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಫಾದರ್, ಪಿಒಕೆ, ಶ್ರೀ ರಾಮಬಾಣ ಚಿರಿತಾ, ಡಾಗ್ ಮತ್ತು ಕಬ್ಜಾ 2 ಚಿತ್ರಗಳನ್ನು ಘೋಷಿಸಲಾಗಿದೆ. ಜೊತೆಗೆ, ಪ್ರೊಡಕ್ಷನ್ ಹೌಸ್ ಮತ್ತೊಂದು ಮಹತ್ವದ ಘೋಷಣೆ ಮಾಡಲು ಸಿದ್ಧವಾಗಿದೆ.

ಮೂಲಗಳ ಪ್ರಕಾರ, ಸಂಸ್ಥೆಯು ತಮ್ಮ ಆರನೇ ಸಿನಿಮಾಗಾಗಿ ನಟ ಶಿವರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಲಿದೆ. ಸೋಮವಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದು, ಈ ಬ್ಯಾನರ್‌ನಿಂದ ಮತ್ತೊಂದು ಬಹುಭಾಷಾ ಸಿನಿಮಾ ತಯಾರಾಗಲಿದೆ.

ಫಾದರ್ ಚಿತ್ರದಲ್ಲಿ ನಟ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ ಮತ್ತು ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ. ಹೆಚ್ಚುವರಿಯಾಗಿ, ನಟ ಸುದೀಪ್ ಅವರೊಂದಿಗೂ ಒಂದು ಯೋಜನೆ ಇದ್ದು, ಅದರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ. ಚಂದ್ರು ಈ ಹಿಂದೆ ಶಿವರಾಜಕುಮಾರ್ ಅವರ ಮೈಲಾರಿ ಚಿತ್ರ ನಿರ್ದೇಶಿಸಿದ್ದರು ಮತ್ತು ಸೆಂಚುರಿ ಸ್ಟಾರ್ ಶಿವಣ್ಣ ಕೂಡ ಉಪೇಂದ್ರ ನಾಯಕನಾಗಿ ನಟಿಸಿದ್ದ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ಮಾಣ ಸಂಸ್ಥೆ ಇದೀಗ ಶಿವರಾಜ್‌ಕುಮಾರ್ ಅವರೊಂದಿಗೆ ಸಿನಿಮಾ ಘೋಷಿಸಿದ್ದು, ನಿರ್ದೇಶಕರು ಮತ್ತು ಇತರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಸದ್ಯ ಶಿವರಾಜಕುಮಾರ್ ಅವರು ನರ್ತನ್ ನಿರ್ದೇಶನದ ಭೈರತಿ ರಣಗಲ್ ಮತ್ತು ಅರ್ಜುನ್ ಜನ್ಯ ಅವರ 45 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, IV ರಿಟರ್ನ್ಸ್‌ ಚಿತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ ಮತ್ತು ರಾಮಚರಣ್ ಅವರ ಮುಂಬರುವ ತೆಲುಗು ಚಿತ್ರದ ಭಾಗವಾಗಿದ್ದಾರೆ. ಅದರಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.