ನವೆಂಬರ್ 24ಕ್ಕೆ 'ಬ್ಯಾಡ್ ಮ್ಯಾನರ್ಸ್' ಗ್ರ್ಯಾಂಡ್ ರಿಲೀಸ್!
ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ 'ಬ್ಯಾಡ್ ಮ್ಯಾನರ್ಸ್' ಗ್ರ್ಯಾಂಡ್ ರಿಲೀಸ್'ಗೆ ಸಜ್ಜಾಗಿದೆ. ಕೆಲವು ಅನಿಶ್ಚಿತತೆ ನಂತರ ಚಿತ್ರ ತಯಾರಕರು ಕೊನೆಗೂ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದು, ನವೆಂಬರ್ 24 ರಂದು ಥಿಯೇಟರ್‌ಗಳಲ್ಲಿ ಬರಲಿದೆ ಎಂದು ಖಚಿತಪಡಿಸಿದ್ದಾರೆ.

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ 'ಬ್ಯಾಡ್ ಮ್ಯಾನರ್ಸ್' ಗ್ರ್ಯಾಂಡ್ ರಿಲೀಸ್'ಗೆ ಸಜ್ಜಾಗಿದೆ. ಕೆಲವು ಅನಿಶ್ಚಿತತೆ ನಂತರ ಚಿತ್ರ ತಯಾರಕರು ಕೊನೆಗೂ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದು, ನವೆಂಬರ್ 24 ರಂದು ಥಿಯೇಟರ್‌ಗಳಲ್ಲಿ ಬರಲಿದೆ ಎಂದು ಖಚಿತಪಡಿಸಿದ್ದಾರೆ.
ಗುರುವಾರ ತಂಡದಿಂದ ಅಧಿಕೃತ ಘೋಷಣೆ ಮಾಡಲಾಗಿದೆ. ಈ ಹಿಂದೆ ದುನಿಯಾ, ಜಾಕಿ, ಅಣ್ಣಾ ಬಾಂಡ್, ಮತ್ತು ಟಗರು ಮುಂತಾದ ಹಿಟ್‌ಗಳನ್ನು ನೀಡಿದ ಖ್ಯಾತ ನಿರ್ದೇಶಕ ಸೂರಿ ನಿರ್ದೇಶಿಸಿದ ಈ ಚಿತ್ರದಲ್ಲಿ ರಚಿತಾ ರಾಮ್, ಪ್ರಿಯಾಂಕಾ ಕುಮಾರ್ ಜೊತೆಗೆ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿದ್ದಾರೆ.
ಜಯಣ್ಣ ವಿತರಣೆ ಹೊಣೆ ಹೊತ್ತಿದ್ದು, ರಾಜ್ಯಾದ್ಯಂತ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ. ಕುತೂಹಲಕಾರಿಯಾಗಿ, ಬ್ಯಾಡ್ ಮ್ಯಾನರ್ಸ್ ರಿಲೀಸ್ ಗೂ ಮುನ್ನಾವೇ ಈಗಾಗಲೇ ಉತ್ತಮ ಗಳಿಕೆ ಕಂಡಿದೆ. ಆನಂದ್ ಆಡಿಯೋ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ನಿರ್ಮಾಪಕರು ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಗಣನೀಯ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.
ಅಲ್ಲದೇ, ಪ್ರತಿಷ್ಠಿತ ಚಾನೆಲ್ ವೊಂದು ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಒಟ್ಟಾರೇ ಬಿಡುಗಡೆಗೂ ರೂ. 13 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ.ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಕೆ ಎಂ ಸುಧೀರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಹಾಡುಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿವೆ.
ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಅವರನ್ನು ಕಮರ್ಷಿಯಲ್ ಆಗಿ ಯಶಸ್ವಿ ನಾಯಕನಾಗಿ ಮಾಡುತ್ತದೆ ಎಂದು ನಿರ್ದೇಶಕ ಸೂರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


