'ಘೋಸ್ಟ್ ' ಗುಂಗಿನಲ್ಲಿರುವ ಶಿವಣ್ಣನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಶ್ರೀನಿ!
ಘೋಸ್ಟ್ ' ಸಿನಿಮಾ ನೋಡಿ ಶಿವಣ್ಣನ ವಿಭಿನ್ನ ಅಭಿನಯದ ಗುಂಗಿನಲ್ಲಿಯೇ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗದೆ ಥಿಯೇಟರ್ ನಿಂದ ಹೊರಗೆ ಬರುವ ಪ್ರೇಕ್ಷಕರಿಗೆ ನಿರ್ದೇಶಕ ಶ್ರೀನಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. 'ಘೋಸ್ಟ್ 2' ಸಿನಿಮಾ ಮಾಡುವುದಾಗಿ ಅವರು ಘೋಷಿಸಿದ್ದಾರೆ.

''ಘೋಸ್ಟ್ ' ಸಿನಿಮಾ ನೋಡಿ ಶಿವಣ್ಣನ ವಿಭಿನ್ನ ಅಭಿನಯದ ಗುಂಗಿನಲ್ಲಿಯೇ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗದೆ ಥಿಯೇಟರ್ ನಿಂದ ಹೊರಗೆ ಬರುವ ಪ್ರೇಕ್ಷಕರಿಗೆ ನಿರ್ದೇಶಕ ಶ್ರೀನಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. 'ಘೋಸ್ಟ್ 2' ಸಿನಿಮಾ ಮಾಡುವುದಾಗಿ ಅವರು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ಶ್ರೀನಿ ‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ. ಮಾತ್ರವಲ್ಲದೆ, ಈಗಿನ ‘ಘೋಸ್ಟ್’ ಸಿನಿಮಾದಲ್ಲಿ ಉತ್ತರ ನೀಡದೇ ಬಿಟ್ಟಿದ್ದ ಹಲವು ಪ್ರಶ್ನೆಗಳಿಗೆ ‘ಘೋಸ್ಟ್ 2.0’ ಸಿನಿಮಾದಲ್ಲಿ ಉತ್ತರ ನೀಡುವುದಾಗಿಯೂ ಹೇಳಿದ್ದಾರೆ. ದಳವಾಯಿ ಬದುಕಿದ್ದಾನ ?, ಅಂಡರ್ಪಾಸ್ ಒಳಗಡೆ ಕಾರು, ಬೈಕ್ಗಳು ಹೆಂಗೆ ಬಂದವು ? ಶಿವಣ್ಣ, ಆ ವಿಗ್ರಹದ ಒಳಗಡೆ ಹೇಗೆ ಹೋದರು? ಬೋಟ್ಗಳನ್ನು ಆಪರೇಟ್ ಮಾಡಿದ್ದು ಯಾರು? ದಳವಾಯಿ ಮಗ ಯಾರು ? ಈ ಎಲ್ಲ ಪ್ರಶ್ನೆಗಳಿಗೂ ‘ಘೋಸ್ಟ್ 2.0’ ನಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.
ಶಿವಣ್ಣ ಅಭಿಯನದ 'ಘೋಸ್ಟ್' ಪ್ರದರ್ಶನದ ಸಂಖ್ಯೆಯು ಪ್ರತಿದಿನವೂ ಏರುತ್ತಲೇ ಇರುತ್ತದೆ. ಭಾನುವಾರ ಬೆಂಗಳೂರು ನಗರದಲ್ಲಿಯೇ 250 ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಘೋಸ್ಟ್’ ಸಿನಿಮಾದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್, ಮಲಯಾಳಂ ನಟ ಜಯರಾಂ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕೆಜಿಎಫ್’ ಸಿನಿಮಾದ ಯಶ್ರ ತಾಯಿ ಅರ್ಚನಾ ಜೋಯಿಸ್ ಸಹ ಇದ್ದಾರೆ. ಸಂದೇಶ್ ನಾಗರಾಜ್ ಚಿತ್ರ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


