ಸಿನಿಮಾ ಸುದ್ದಿ

Bigg Boss Kannada season 10 Contestants: ಕನ್ನಡ ಬಿಗ್ ಬಾಸ್ ಸೀಸನ್ 10 ಆರಂಭ, ಈ ಬಾರಿಯ ಸ್ಪರ್ಧಿಗಳ ವಿವರ ಹೀಗಿದೆ...

ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯವಾಗಿರುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಗೆ ನಿನ್ನೆ ಅಕ್ಟೋಬರ್ 8 ಭಾನುವಾರ ಅದ್ದೂರಿ ಚಾಲನೆ ಸಿಕ್ಕಿದೆ. ಈ ಹಿಂದಿನ 9 ಸೀಸನ್ ಗಳಂತೆ ನಟ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

Bigg Boss Kannada season 10 Contestants: ಕನ್ನಡ ಬಿಗ್ ಬಾಸ್ ಸೀಸನ್ 10 ಆರಂಭ, ಈ ಬಾರಿಯ ಸ್ಪರ್ಧಿಗಳ ವಿವರ ಹೀಗಿದೆ...
ಕನ್ನಡ ಬಿಗ್ ಬಾಸ್ ಸೀಸನ್ 10-ಫೋಟೋ ಕೃಪೆ-ಕಲರ್ಸ್ ಕನ್ನಡ ವಾಹಿನಿಯ ಫೇಸ್ ಬುಕ್ ಪುಟದಿಂದ)
Published On :

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯವಾಗಿರುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಗೆ ನಿನ್ನೆ ಅಕ್ಟೋಬರ್ 8 ಭಾನುವಾರ ಅದ್ದೂರಿ ಚಾಲನೆ ಸಿಕ್ಕಿದೆ. ಈ ಹಿಂದಿನ 9 ಸೀಸನ್ ಗಳಂತೆ ನಟ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ಪ್ರತಿ ಸೀಸನ್ ನಲ್ಲಿಯೂ ದೊಡ್ಮನೆಯೊಳಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರ್ಯಾರು ಎಂಬ ಬಗ್ಗೆ ಕುತೂಹಲವಿರುತ್ತದೆ. ಬಿಗ್ ಬಾಸ್ ಗೆ ಹೋಗುವ ಮುನ್ನ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿರುತ್ತದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿರುವ ಸ್ಪರ್ಧಿಗಳ ವಿವರ ಇಂತಿದೆ: 

ಸೀಸನ್ 10ನ ಸ್ಪರ್ಧಿಗಳು ಇವರು: ಕಿರುತೆರೆ ಮೂಲಕ ಫೇಮಸ್ ಆದ ಕೃಷ್ಣ ರುಕ್ಮಣಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ, ನಾಗಿಣಿ 2 ಮೂಲಕ ಜನಪ್ರಿಯತೆ ಪಡೆದ ನಮ್ರತಾ ಗೌಡ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದರು.

ಸ್ನೇಹಿತ್ ಗೌಡ ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನರ ಮನಗೆದ್ದರು. ಅವರು ಕೂಡ ಈ ಬಾರಿ ಪ್ರವೇಶ ಪಡೆದಿದ್ದಾರೆ. 

ರ‍್ಯಾಪರ್ ಈಶಾನಿ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದಿದ್ದು ದುಬೈ ಹಾಗೂ ಲಾಸ್ ಏಂಜಲೀಸ್‌ನಲ್ಲಿ. ಹರ ಹರ ಮಹಾದೇವ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿರುವ ವಿನಯ್ ಗೌಡ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಿದ್ದಾರೆ.   

ಮಿಸ್ ಟ್ರಾನ್ಸ್ ಜೆಂಡರ್ ಕ್ವೀನ್ ಆಗಿ, ಬ್ಯೂಟಿ ಪಾರ್ಲರ್, ಹೊಟೇಲ್ ಉದ್ಯಮ ನಡೆಸುತ್ತಿರುವ ತೃತೀಯ ಲಿಂಗಿ ನೀತು ವನಜಾಕ್ಷಿ ಹಾಗೂ ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯರಾದ ತುಕಾಲಿ ಸಂತೋಷ್ ದೊಡ್ಮನೆ ಪ್ರವೇಶಿಸಿದ್ದಾರೆ.ರಂಗೋಲಿ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದ ಸಿರಿ, ಉರಗಗಳನ್ನು ಹಿಡಿಯುವುದರಲ್ಲಿ ಪ್ರವೀಣರಾದ ಸ್ನೇಕ್ ಶ್ಯಾಮ್ ಈ ಬಾರಿ ಸ್ಪರ್ಧಿಸುತ್ತಿದ್ದಾರೆ.

ಲಕ್ಷಣ ಧಾರಾವಾಹಿಯಲ್ಲಿ ನಟಿಸಿದ್ದ ಭಾಗ್ಯಶ್ರೀ, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಗೌರೀಶ್ ಅಕ್ಕಿ ಸಹ ಬಿಗ್ ಬಾಸ್‌ಗೆ ಬಂದಿದ್ದಾರೆ.  

777 ಚಾರ್ಲಿ ಸಿನಿಮಾ ಮೂಲಕ ಜನರ ಮನಸ್ಸಿಗೆ ಹತ್ತಿರುವಾದ ಸಂಗೀತಾ ಶೃಂಗೇರಿ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ನೈಜೀರಿಯಾ ಕನ್ನಡಿಗ  ಮೈಕಲ್ ಪ್ರವೇಶ ಪಡೆದಿದ್ದಾರೆ.

ಮಂಗಳ ಗೌರಿ ಧಾರಾವಾಹಿಯಲ್ಲಿ ವಿಲನ್ ಆಗಿ ಗಮನ ಸೆಳೆದ ತನಿಷಾ ಕುಪ್ಪಂಡ, ವೃತ್ತಿಯಲ್ಲಿ ರೈತ ವರ್ತೂರ್ ಸಂತೋಷ್ ಸಹ ಬಿಗ್ ಮನೆಯೊಳಗೆ ಪ್ರವೇಶಿಸಿದ್ದಾರೆ. 

ಕಿರುತೆರೆಯಲ್ಲಿ ಗಮನ ಸೆಳೆದಿರುವ ಕಾರ್ತಿಕ್, ಡ್ರೋನ್ ಪ್ರತಾಪ್ ಕೂಡ ಬಿಗ್ ಬಾಸ್ ಮನೆಯೊಳಗಿದ್ದಾರೆ.ಇವರೆಲ್ಲರೂ ಇಂದಿನಿಂದ ಬಿಗ್ ಬಾಸ್ ಮನೆಯೊಳಗೆ ಯಾವ ರೀತಿ ಇರಲಿದ್ದಾರೆ, ಯಾವ ರೀತಿ ಸ್ಪರ್ಧೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ಕುತೂಹಲವಿದೆ.

ಈ ಬಾರಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.