ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಬೈರತಿ ರಣಗಲ್ ಚಿತ್ರಕ್ಕೆ 'ರವಿ ಬಸ್ರೂರು' ಸಂಗೀತ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರ ಮುಂದಿನ ಬಹು ನಿರೀಕ್ಷಿತ 'ಬೈರತಿ ರಣಗಲ್' ಚಿತ್ರಕ್ಕೆ ಕೆಜಿಎಫ್ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.

ಶಿವರಾಜ್ ಕುಮಾರ್ ಬೈರತಿ ರಣಗಲ್ ಚಿತ್ರಕ್ಕೆ 'ರವಿ ಬಸ್ರೂರು' ಸಂಗೀತ
ಭೈರತಿ ರಣಗಲ್ ಚಿತ್ರದ ಪೋಸ್ಟರ್
Published On :

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರ ಮುಂದಿನ ಬಹು ನಿರೀಕ್ಷಿತ 'ಬೈರತಿ ರಣಗಲ್' ಚಿತ್ರಕ್ಕೆ ಕೆಜಿಎಫ್ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.

ಇತ್ತೀಚೆಗಷ್ಟೇ ಬೈರತಿ ರಣಗಲ್ ಚಿತ್ರತಂಡ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ಸಿನಿಮಾ ಬಗ್ಗೆ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಹಂಚಿಕೊಂಡಿದ್ದು, ಚಿತ್ರ ತಂಡಕ್ಕೆ ಸಂಗೀತ ನಿರ್ದೇಶಕ ರವಿ ಬಸ್ರೂರು ಆಗಮನದ ಕುರಿತು ಚಿತ್ರ ತಂಡ ಮಾಹಿತಿ ನೀಡಿದೆ.

2017ರಲ್ಲಿ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಮಫ್ತಿ’ (Mufti) ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ `ಭೈರತಿ ರಣಗಲ್’ ಪಾತ್ರ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ `ಭೈರತಿ ರಣಗಲ್’ ಅನ್ನು ಈ ಸಿನಿಮಾಕ್ಕೂ ಇಡಲಾಗಿದೆ. ಭೈರತಿ ರಣಗಲ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿದ್ದು, ಚಿತ್ರವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ.

ಇದೀಗ ಚಿತ್ರದ ನೂತನ ಅಪ್ಡೇಟ್ ನೀಡಲಾಗಿದ್ದು, ಚಿತ್ರಕ್ಕೆ `ಕೆಜಿಎಫ್ 2′ (KGF 2) ಖ್ಯಾತಿಯ ರವಿ ಬಸ್ರೂರು (Ravi Basrur) ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಚಿತ್ರತಂಡ ಘೋಷಿಸಿದೆ. ಈ ಕುರಿತು ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ರವಿ ಬಸ್ರೂರು ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಈ ಹಿಂದೆ ಇದೇ ತಂಡದ ಜೊತೆ ಕೈ ಜೋಡಿಸಿ `ಮಫ್ತಿ’ಗೂ ಸಂಗೀತ ನಿರ್ದೇಶನ ಮಾಡಿ ಗೆದ್ದಿದ್ದ ರವಿ ಬಸ್ರೂರು ಈಗ `ಭೈರತಿ ರಣಗಲ್’ ಸಿನಿಮಾಗೂ ಕೆಲಸ ನಿರ್ವಹಿಸಲಿದ್ದಾರೆ. ಈ ಮೂಲಕ ಹಿಟ್ ಕಾಂಬಿನೇಷನ್ ಮತ್ತೆ ಒಂದಾದಂತಾಗಿದೆ.

ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್‌ಗೆ ಇದು ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ `ವೇದ’ ಮೂಲಕ ಹಿಟ್ ನೀಡಿರುವ ನಿರ್ಮಾಪಕಿ ಗೀತಾ `ಭೈರತಿ ರಣಗಲ್’ ಪ್ಯಾನ್ ಇಂಡಿಯಾ ಸಿನಿಮಾಗೂ ಸಾಥ್ ನೀಡುತ್ತಿದ್ದಾರೆ. ಸದ್ಯದಲ್ಲಿಯೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.