ಸಿನಿಮಾ ಸುದ್ದಿ

ಅಮಿತ್ ಶಾ ಭೇಟಿ ಮಾಡಿದ ಚಿರಂಜೀವಿ, ಪುತ್ರ ರಾಮ್ ಚರಣ್ 

ಆರ್ ಆರ್ ಆರ್ ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್‌ ಪ್ರಶಸ್ತಿ ಸಿಕ್ಕಿದ್ದು, ಚಿತ್ರ ತಂಡ ಪ್ರಶಸ್ತಿ ಜತೆ ಭಾರತಕ್ಕೆ ಮರಳಿದೆ. RRR ಚಿತ್ರದ ನಟ ರಾಮ್ ಚರಣ್ ಹಾಗೂ ಅವರ ತಂದೆ ಚಿರಂಜೀವಿ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್...

ಅಮಿತ್ ಶಾ ಭೇಟಿ ಮಾಡಿದ ಚಿರಂಜೀವಿ, ಪುತ್ರ ರಾಮ್ ಚರಣ್ 
ಅಮಿತ್ ಶಾ ಭೇಟಿ ಮಾಡಿದ ಚಿರಂಜೀವಿ, ಪುತ್ರ ರಾಮ್ ಚರಣ್
Published On :

ನವದೆಹಲಿ: ಆರ್ ಆರ್ ಆರ್ ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್‌ ಪ್ರಶಸ್ತಿ ಸಿಕ್ಕಿದ್ದು, ಚಿತ್ರ ತಂಡ ಪ್ರಶಸ್ತಿ ಜತೆ ಭಾರತಕ್ಕೆ ಮರಳಿದೆ. RRR ಚಿತ್ರದ ನಟ ರಾಮ್ ಚರಣ್ ಹಾಗೂ ಅವರ ತಂದೆ ಚಿರಂಜೀವಿ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

ಅಮಿತ್ ಶಾ ಅವರು ರಾಮ್ ಚರಣ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅವರಿಗೆ ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿದರು.

ರಾಮ್ ಚರಣ್ ಅವರು ಶೀಘ್ರದಲ್ಲೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ತೆಲುಗು ಸಿನಿಮಾದ ಜನಪ್ರಿಯ 'ನಾಟು ನಾಟು' ಹಾಡು​ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.