ಸಿನಿಮಾ ಸುದ್ದಿ

ಸ್ಫೂರ್ತಿಯಾದ ವ್ಯಕ್ತಿಗೆ ಎಲ್ಎಎಫ್ ಸಿಎ ಪ್ರಶಸ್ತಿ ಕಾರ್ಯಕ್ರಮದಲ್ಲಿ ಧನ್ಯವಾದ ಅರ್ಪಿಸಿದ ಎಂಎಂ ಕೀರವಾಣಿ

ಜಾಗತಿಕವಾಗಿ ಮನ್ನಣೆ ಗಳಿಸಿರುವ ಆರ್ ಆರ್ ಆರ್ ನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಲಾಸ್ ಏಂಜಲೀಸ್ ಫಿಲ್ಮ್ಸ್ ಕ್ರಿಟಿಕ್ಸ್ ಅಸೋಸಿಯೇಷನ್ (ಎಲ್ಎಎಫ್ ಸಿಎ) ಪ್ರಶಸ್ತಿ ಕಾರ್ಯಕ್ರಮದಲ್ಲಿ ತಮಗೆ ಸ್ಪೂರ್ತಿಯಾದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.

ಸ್ಫೂರ್ತಿಯಾದ ವ್ಯಕ್ತಿಗೆ ಎಲ್ಎಎಫ್ ಸಿಎ ಪ್ರಶಸ್ತಿ ಕಾರ್ಯಕ್ರಮದಲ್ಲಿ ಧನ್ಯವಾದ ಅರ್ಪಿಸಿದ ಎಂಎಂ ಕೀರವಾಣಿ
ಎಂಎಂ ಕೀರವಾಣಿ
Published On :

ಲಾಸ್ ಏಂಜಲೀಸ್: ಜಾಗತಿಕವಾಗಿ ಮನ್ನಣೆ ಗಳಿಸಿರುವ ಆರ್ ಆರ್ ಆರ್ ನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಲಾಸ್ ಏಂಜಲೀಸ್ ಫಿಲ್ಮ್ಸ್ ಕ್ರಿಟಿಕ್ಸ್ ಅಸೋಸಿಯೇಷನ್ (ಎಲ್ಎಎಫ್ ಸಿಎ) ಪ್ರಶಸ್ತಿ ಕಾರ್ಯಕ್ರಮದಲ್ಲಿ ತಮಗೆ ಸ್ಪೂರ್ತಿಯಾದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ. 

ಅಮೇರಿಕನ್ ಸಂಗೀತ ನಿರ್ದೇಶಕ ಜಾನ್ ವಿಲಿಯಮ್ಸ್ ಅವರು ತಮಗೆ ಫಿಲ್ಮ್ ಸೌಂಡ್ ಟ್ರಾಕ್ ನಲ್ಲಿ ಸರಳತೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು ಎಂದು ಕೀರವಾಣಿ ಸ್ಮರಿಸಿದ್ದಾರೆ. ಮಿಲೇನಿಯಮ್ ಹೋಟೆಲ್ ಹಾಗೂ ರೆಸಾರ್ಟ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

ಎಎಂ ಕೀರವಾಣಿ ಇದೇ ವೇಳೆ ತಮ್ಮಲ್ಲಿ ನಂಬಿಕೆ ಇಟ್ಟು ಸೃಜನಾತ್ಮಕ ಸ್ವಾತಂತ್ರ್ಯ ನೀಡಿದ ನಿರ್ದೇಶಕ ರಾಜಮೌಳಿ ಅವರಿಗೂ ಧನ್ಯವಾದ ತಿಳಿಸಿದ್ದಾರೆ. 

ಹೇಗೆ ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶನದ ಹಾರರ್ ಕ್ಲಾಸಿಕ್ ಸಿನಿಮಾ ಜಾಸ್ (Jaws) ತಾವು ಸಿನಿಮಾ ಸಂಗೀತವನ್ನು ನೋಡುವ ರೀತಿಯನ್ನೇ ಬದಲಿಸಿತು ಎಂಬುದನ್ನು ಕೀರವಾಣಿ ವಿವರಿಸಿದ್ದಾರೆ. ಈ ಸಿನಿಮಾದಲ್ಲಿನ ಹಾಡುಗಳನ್ನು ಅಮೇರಿಕನ್ ಸಂಗೀತ ನಿರ್ದೇಶಕ ಜಾನ್ ವಿಲಿಯಮ್ಸ್ ಸಂಯೋಜಿಸಿದ್ದು, ಅವರಿಗೆ ಎರಡನೇ ಅಕಾಡೆಮಿ ಅವಾರ್ಡ್ ಲಭಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.