ಸಿನಿಮಾ ಸುದ್ದಿ

ಮಿಸ್ ಯುಎಸ್ ಎ ಆರ್'ಬೋನಿ ಗೇಬ್ರಿಯಲ್ ಗೆ ಭುವನ ಸುಂದರಿ ಕಿರೀಟ, ಕರ್ನಾಟಕದ ದಿವಿತಾ ರೈಗೆ ನಿರಾಸೆ

ಅಮೆರಿಕದ ಎ ಆರ್'ಬೋನಿ ಗೇಬ್ರಿಯಲ್ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೂಸಿಯಾನದ ಓರ್ಲಿಯನ್ಸ್‌ನಲ್ಲಿ ಭಾನುವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಇತರ 83 ಸುಂದರಿಯರನ್ನು ಹಿಂದಿಕ್ಕಿದ್ದ ಆರ್'ಬೋನಿ ಗೇಬ್ರಿಯಲ್, ವಿಶ್ವ ಸುಂದರಿ ಕಿರೀಟ ಧರಿಸಿದರು.

ಮಿಸ್ ಯುಎಸ್ ಎ ಆರ್'ಬೋನಿ ಗೇಬ್ರಿಯಲ್ ಗೆ ಭುವನ ಸುಂದರಿ ಕಿರೀಟ, ಕರ್ನಾಟಕದ ದಿವಿತಾ ರೈಗೆ ನಿರಾಸೆ
ಆರ್ ಬೋನಿ ಗೇಬ್ರಿಯಲ್
Published On :

ಲೂಸಿಯಾನ: ಅಮೆರಿಕದ ಎ ಆರ್'ಬೋನಿ ಗೇಬ್ರಿಯಲ್  ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೂಸಿಯಾನದ ಓರ್ಲಿಯನ್ಸ್‌ನಲ್ಲಿ ಭಾನುವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಇತರ 83 ಸುಂದರಿಯರನ್ನು ಹಿಂದಿಕ್ಕಿದ್ದ ಆರ್'ಬೋನಿ ಗೇಬ್ರಿಯಲ್, ನೂತನ ಭುವನ ಸುಂದರಿ ಕಿರೀಟ ಧರಿಸಿದರು.  

71 ನೇ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಿಸ್ ಇಂಡಿಯಾ-ಯೂನಿವರ್ಸ್ ದಿವಿತಾ ರೈ ಅವರು ಅಗ್ರ 16 ರಲ್ಲಿ ಸ್ಥಾನ ಪಡೆದರು ಆದರೆ ಅಗ್ರ 5 ರೊಳಗೆ ಪ್ರವೇಶಿಸಲು ವಿಫಲರಾದರು. ಗೇಬ್ರಿಯಲ್ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿದ್ದು, ಉತ್ತರ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ಫ್ಯಾಶನ್ ಡಿಸೈನ್‌ನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ.

ಗೇಬ್ರಿಯಲ್ ತನ್ನದೇ ಆದ ಪರಿಸರ ಸ್ನೇಹಿ ಉಡುಪುಗಳ ಕಂಪನಿ ಸಹ ನಡೆಸುತ್ತಿದ್ದಾರೆ. ಮಿಸ್ ವೆನೆಜುವೆಲಾ ಅಮಂಡಾ ಡುಡಾಮೆಲ್ ಮೊದಲ ರನ್ನರ್ ಅಪ್ ಆದರು.  ಡೊಮಿನಿಕನ್ ರಿಪಬ್ಲಿಕ್‌ನ ಆಂಡ್ರೀನಾ ಮಾರ್ಟಿನೆಜ್ ಫೌನಿಯರ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು,  11 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕಾದವರು ಭುವನ ಸುಂದರಿ ಕಿರೀಟವನ್ನು ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.