ಸಿನಿಮಾ ಸುದ್ದಿ

ಕೆಜಿಎಫ್‌-2 ನಂತ 'ಮೈಂಡ್ ಲೆಸ್' ಚಿತ್ರ ನೋಡಲು ಬಯಸಲ್ಲ, ನಾನು ಇಷ್ಟಪಡುವ ಟೈಪ್ ಸಿನಿಮಾ ಅದಲ್ಲ: ಚರ್ಚೆಗೆ ಗ್ರಾಸವಾಯ್ತು ಕಿಶೋರ್ ಹೇಳಿಕೆ!

ಅಚ್ಚರಿ ಎಂದರೆ ನಟ ಕಿಶೋರ್​ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಕೆಜಿಎಫ್‌-2 ನಂತ 'ಮೈಂಡ್ ಲೆಸ್' ಚಿತ್ರ ನೋಡಲು ಬಯಸಲ್ಲ, ನಾನು ಇಷ್ಟಪಡುವ ಟೈಪ್ ಸಿನಿಮಾ ಅದಲ್ಲ: ಚರ್ಚೆಗೆ ಗ್ರಾಸವಾಯ್ತು ಕಿಶೋರ್ ಹೇಳಿಕೆ!
ಕಿಶೋರ್
Published On :

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಸಿನಿಮಾ ಬಗ್ಗೆ ಇಡೀ ದೇಶವೇ ಮಾತನಾಡಿದೆ. ಕೋಟ್ಯಂತರ ಪ್ರೇಕ್ಷಕರು ‘ಕೆಜಿಎಫ್​ 2’ ನೋಡಿ ಮೆಚ್ಚಿಕೊಂಡಿದ್ದಾರೆ. ಅಚ್ಚರಿ ಎಂದರೆ ನಟ ಕಿಶೋರ್​ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್  ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಇದು ಸರಿಯೋ ಅಥವಾ ತಪ್ಪೋ ಎಂಬುದು ನನಗೆ ಗೊತ್ತಿಲ್ಲ. ಕೆಜಿಎಫ್‌ 2 ಚಿತ್ರವನ್ನು ಮೈಂಡ್‌ಲೆಸ್‌ ಸಿನಿಮಾ ಎಂದಿದ್ದಾರೆ. ‘ಇದು ಸರಿಯೋ ಅಥವಾ ತಪ್ಪೋ ಎಂಬುದು ನನಗೆ ಗೊತ್ತಿಲ್ಲ. ನಾನು ಈ ವರೆಗೂ ‘ಕೆಜಿಎಫ್‌ 2’ ಸಿನಿಮಾವನ್ನು ನೋಡಿಲ್ಲ. ನಾನು ಇಷ್ಟಪಡುವ ರೀತಿಯ ಸಿನಿಮಾ ಅದಲ್ಲ. ಇದು ನನ್ನ ವೈಯಕ್ತಿಕ ಆಯ್ಕೆಯ ವಿಚಾರ’ ಎಂದಿರುವ ಕಿಶೋರ್​, ‘ಯಶಸ್ವಿ ಆಗಿರದ ಕೆಲವು ಸಣ್ಣ ಸಿನಿಮಾಗಳನ್ನು ನೋಡಲು ನಾನು ಇಷ್ಟಪಡುತ್ತೇನೆ. ಬುದ್ಧಿಯಿಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರದ ಬಗ್ಗೆ ಮಾತನಾಡುವ ಚಿತ್ರಗಳನ್ನು ನಾನು ನೋಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಮೂಲತಃ ಕನ್ನಡದವರಾಗಿರುವ ಕಿಶೋರ್‌ ಕನ್ನಡ ಮಾತ್ರವಲ್ಲದೆ, ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗಿನಲ್ಲಿಯೂ ಇವರಿಗೆ ಬೇಡಿಕೆ ಇದೆ. ಹಿಂದಿಯ ವೆಬ್‌ಸಿರೀಸ್‌ಗಳಲ್ಲಿಯೂ ನಟಿಸಿ ಮೋಡಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.