'ಮಾರ್ಕ್ ಆಂಟನಿ' ಸಿನಿಮಾ ಸೆಟ್‌ನಲ್ಲಿ ಅವಘಡ; ದೊಡ್ಡ ಅನಾಹುತದಿಂದ ತಮಿಳು ನಟ ವಿಶಾಲ್ ಪಾರು
ತಮಿಳು ನಟ ವಿಶಾಲ್ ತಮ್ಮ 'ಮಾರ್ಕ್ ಆಂಟನಿ' ಸಿನಿಮಾದ ಚಿತ್ರೀಕರಣದ ವೇಳೆ ಸಾವಿನ ಸಮೀಪದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಚೆನ್ನೈ: ತಮಿಳು ನಟ ವಿಶಾಲ್ ತಮ್ಮ 'ಮಾರ್ಕ್ ಆಂಟನಿ' ಸಿನಿಮಾದ ಚಿತ್ರೀಕರಣದ ವೇಳೆ ಸಾವಿನ ಸಮೀಪದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಸೆಟ್‌ನಲ್ಲಿದ್ದ ಟ್ರಕ್ ಸ್ಥಿರತೆಯನ್ನು ಕಳೆದುಕೊಂಡು ನಟ ಮತ್ತು ಅವರ ಸಹ-ನಟರ ಕಡೆಗೆ ಬಂದಿದೆ. ವಿಶಾಲ್ ಸೇರಿದಂತೆ ನಟರು ಇದ್ದ ಜಾಗಕ್ಕೆ ಬೃಹತ್ ಟ್ರಕ್ ಡಿಕ್ಕಿ ಹೊಡೆಯುವ ಹಂತದಲ್ಲಿತ್ತು. ಆದರೆ, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯೋಜನೆಯ ಪ್ರಕಾರ, ಟ್ರಕ್ ಗೋಡೆಗೆ ಡಿಕ್ಕಿ ಹೊಡೆದು ನಂತರ ನಿಲ್ಲಬೇಕಿತ್ತು. ಆದರೆ, ಗೋಡೆ ಕುಸಿದಿದೆ ಮತ್ತು ಟ್ರಕ್ ನಿಯಂತ್ರಣ ಕಳೆದುಕೊಂಡು ಕಲಾವಿದರು ಇರುವ ಪ್ರದೇಶದ ಕಡೆಗೆ ಮುನ್ನಡೆದೆ.
ಈ ಕುರಿತು ಟ್ವೀಟ್ ಮಾಡಿರುವ ವಿಶಾಲ್, 'ಕೆಲವೇ ಸೆಕೆಂಡುಗಳು ಮತ್ತು ಕೆಲವು ಇಂಚುಗಳ ಅಂತರದಲ್ಲಿ ನನ್ನ ಜೀವ ಉಳಿದಿದೆ. ಸರ್ವಶಕ್ತನಿಗೆ ಧನ್ಯವಾದಗಳು. ಈ ಘಟನೆಯ ನಂತರ ನಾನು ಜಡಗಟ್ಟಿದ್ದೇನೆ. ನಾನು ಮತ್ತೆ ನನ್ನ ಪಾದಗಳ ಮೇಲೆ ನಿಂತಿದ್ದೇನೆ ಮತ್ತು ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗಿದ್ದೇನೆ' ಎಂದಿದ್ದಾರೆ.
ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಎಸ್‌ಜೆ ಸೂರ್ಯ ಕೂಡ ನಟಿಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಬರಬೇಕಿದೆ. ಅಂತರರಾಷ್ಟ್ರೀಯ ಖ್ಯಾತಿಯ ಸಾಹಸ ನಿರ್ದೇಶಕ ಪೀಟರ್ ಹೆನ್ ಅವರು ದಿಲೀಪ್ ಸುಬ್ಬರಾಯನ್, ಕಮಲ್ ಕಣ್ಣನ್ ಮತ್ತು ರವಿವರ್ಮ ಅವರೊಂದಿಗೆ ಸಾಹಸ ದೃಶ್ಯಗಳನ್ನು ಮಾಡುತ್ತಿದ್ದಾರೆ.
ವಿಶಾಲ್ ಮತ್ತು ಎಸ್‌ಜೆ ಸೂರ್ಯ ಹೊರತುಪಡಿಸಿ, ಅಭಿನಯ, ರಿತು ವರ್ಮಾ ಮತ್ತು ಸುನಿಲ್ ವರ್ಮಾ ಚಿತ್ರದಲ್ಲಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


