ಸಿನಿಮಾ ಸುದ್ದಿ

ಸೆಪ್ಟೆಂಬರ್ 15ಕ್ಕೆ ರಾಘವೇಂದ್ರ ರಾಜ್​ಕುಮಾರ್​ ನಟನೆಯ '13' ಚಿತ್ರ ಬಿಡುಗಡೆ

ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ನಟಿ ಶ್ರುತಿ ಒಟ್ಟಿಗೆ ನಟಿಸಿರುವ '13' ಸಿನಿಮಾವು ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.

ಸೆಪ್ಟೆಂಬರ್ 15ಕ್ಕೆ ರಾಘವೇಂದ್ರ ರಾಜ್​ಕುಮಾರ್​ ನಟನೆಯ '13' ಚಿತ್ರ ಬಿಡುಗಡೆ
ಚಿತ್ರದ ಸ್ಟಿಲ್.
Published On :

ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ನಟಿ ಶ್ರುತಿ ಒಟ್ಟಿಗೆ ನಟಿಸಿರುವ '13' ಸಿನಿಮಾವು ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.

ಈ ಹಿಂದೆ 'ಪಲ್ಲಕ್ಕಿ', 'ಅಮೃತವಾಹಿನಿ'ಯಂಥ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ ನರೇಂದ್ರಬಾಬು ಅವರು '13' ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಂತರಧರ್ಮೀಯ ಪ್ರೇಮ ಕಥೆ ಇದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವ ರೀತಿ ಕಷ್ಟ ಅನುಭವಿಸುತ್ತಾರೆ ಎಂಬುವ ಕಥೆ ಸಿನಿಮಾದಲ್ಲಿದೆಯಂತೆ

ಮನುಷ್ಯ ಸಂಬಂಧಗಳನ್ನು ಬೆಸೆಯುವ ಸಂದೇಶ ಕೂಡ ಈ ಚಿತ್ರದಲ್ಲಿದೆಯಂತೆ. ಸೆನ್ಸಾರ್‌ನಲ್ಲಿ ಈಗಾಗಲೇ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

ಈ ಸಿನಿಮಾ ನರೇಂದ್ರ ಬಾಬು ಅವರ 8ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಮೂರು ಕಮರ್ಷಿಯಲ್ ಹಾಡುಗಳಿವೆ. ಯು ವಿ ಪ್ರೊಡಕ್ಷನ್ ಅಡಿಯಲ್ಲಿ ಕೆ ಸಂಪತ್‌ ಕುಮಾರ್‌, ಎಚ್‌ ಎಸ್ ಮಂಜುನಾಥ್‌, ಮಂಜುನಾಥ ಗೌಡ ಹಾಗೂ ಸಿ ಕೇಶವಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಶೋಗನ್ ಬಾಬು ಅವರು ಸಂಗೀತ ನೀಡಿದ್ದಾರೆ.

ಪಾರ್ಟ್ 1 ಹಾಗೂ ಪಾರ್ಟ್ 2ರಂತೆ ಚಿತ್ರದಂತ ಸಿನಿಮಾ ಮಾಡಿದ್ದು, ಪಾರ್ಟ್ 1 ಚಿತ್ರವು ಸೆಪ್ಟೆಂಬರ್ 15ರಂದು ಬಿಡುಗಡೆಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.