ಸಿನಿಮಾ ಸುದ್ದಿ

ಚಂದನವನದಲ್ಲಿ ಬರ್ತಿದೆ ಮಲೆನಾಡ ಸೊಗಡಿನ ಸಿನಿಮಾ 'ಕೆರೆಬೇಟೆ'; ಗೌರಿ ಶಂಕರ್ ನಾಯಕ

ಐದು ವರ್ಷಗಳ ವಿರಾಮದ ನಂತರ ನಟ ಗೌರಿ ಶಂಕರ್ ಅವರು ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಚಿತ್ರವನ್ನು ಮಲೆನಾಡಿನ ಸುಂದರವಾದ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ.

ಚಂದನವನದಲ್ಲಿ ಬರ್ತಿದೆ ಮಲೆನಾಡ ಸೊಗಡಿನ ಸಿನಿಮಾ 'ಕೆರೆಬೇಟೆ'; ಗೌರಿ ಶಂಕರ್ ನಾಯಕ
ಗೌರಿ ಶಂಕರ್
Published On :

ಐದು ವರ್ಷಗಳ ವಿರಾಮದ ನಂತರ ನಟ ಗೌರಿ ಶಂಕರ್ ಅವರು ರಾಜ್ ಗುರು ನಿರ್ದೇಶನದ 'ಕೆರೆಬೇಟೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಚಿತ್ರವನ್ನು ಮಲೆನಾಡಿನ ಸುಂದರವಾದ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಇದುವೇ ಚಿತ್ರವನ್ನು ವಿಭಿನ್ನ ಮತ್ತು ವಿಶೇಷವಾಗಿಸಿದೆ. ಮಲೆನಾಡು ತನ್ನ ಸಾಂಪ್ರದಾಯಿಕ ಮೀನುಗಾರಿಕೆ ಅಭ್ಯಾಸಗಳಿಗೆ ಹೆಸರುವಾಸಿಯಾಗಿದ್ದು, ಇದುವೇ ಚಿತ್ರಕ್ಕೆ ತಿರುವು ನೀಡುತ್ತದೆ. 

ಶೀರ್ಷಿಕೆ ಪೋಸ್ಟರ್ ಮೂಲಕ ಚಿತ್ರತಂಡ ಬಹಿರಂಗಪಡಿಸಿದಂತೆ ಸಿನಿಮಾ ಹಳೆಯ ಮೀನುಗಾರಿಕೆ ವಿಧಾನಗಳ ಮೇಲೆ ಕೇಂದ್ರೀಕರಿಸುವ ಗ್ರಾಮೀಣ ಭಾಗದಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ.

Story image

ಸಂಪೂರ್ಣ ಶಿವಮೊಗ್ಗದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ. ಈ ಯೋಜನೆ ಮೂಲಕ ನಟ ಗೌರಿ ಶಂಕರ್ ಅವರು ಜೈ ಶಂಕರ್ ಪಟೇಲ್ ಜೊತೆಗೂಡಿ ನಿರ್ಮಾಪಕರಾಗಿಯೂ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಕೆರೆಬೇಟೆಗೆ ಗಗನ್ ಬದರಿಯಾ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.