ಸಿನಿಮಾ ಸುದ್ದಿ

'ಭಜರಂಗಿ' ನಿರ್ದೇಶಕ ಚೇತನ್ ಕುಮಾರ್ ಜೊತೆ ಧೀರೇನ್ ರಾಮ್ ಮುಂದಿನ ಸಿನಿಮಾ

ಭರ್ಜರಿ, ಬಹದ್ದೂರ್ ಮತ್ತು ಜೇಮ್ಸ್‌ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಚೇತನ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಧಿರೇನ್ ಉತ್ಸುತರಾಗಿದ್ದಾರೆ.

'ಭಜರಂಗಿ' ನಿರ್ದೇಶಕ ಚೇತನ್ ಕುಮಾರ್ ಜೊತೆ ಧೀರೇನ್ ರಾಮ್ ಮುಂದಿನ ಸಿನಿಮಾ
ಧೀರೇನ್ ರಾಮ್ ಮತ್ತು ಚೇತನ್ ಕುಮಾರ್
Published On :

ಶಿವ 143 (2020) ಚಿತ್ರಕ್ಕೆ ಪಾದಾರ್ಪಣೆ ಮಾಡಿದ ಧೀರೇನ್ ರಾಮ್‌ಕುಮಾರ್ ಮೊದಲ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದರು ಮತ್ತು ಜಯಣ್ಣ ಪ್ರೊಡಕ್ಷನ್ಸ್ ನಿರ್ಮಿಸಿತ್ತು. ಇಷ್ಟು ದಿನ ಕಾದ ನಂತರ  ಧೀರೆನ್ ತಮ್ಮ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಾಲ್ ತೋರಿದ್ದಾರೆ.

ಭರ್ಜರಿ, ಬಹದ್ದೂರ್ ಮತ್ತು ಜೇಮ್ಸ್‌ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಚೇತನ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಧಿರೇನ್ ಉತ್ಸುತರಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಧೀರೇನ್ ಅವರ ಮುಂದಿನ ಚಿತ್ರ  ಬಡವ ರಾಸ್ಕಲ್ ನಿರ್ದೇಶಕ ಶಂಕರ್ ಗುರು ಅವರ ಜೊತೆಯಲ್ಲಿ ನಡೆಯಬೇಕಿತ್ತು. ಆದರೆ ಅನಿರೀಕ್ಷಿತ ಕಾರಣಗಳಿಂದ ಯೋಜನೆ ವಿಳಂಬವಾಗಿದ್ದು, ಧೀರನ್ ಚೇತನ್ ಕುಮಾರ್ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.

ನಿರ್ದೇಶಕ ಚೇತನ್ ಪ್ರಸ್ತುತ ನಟ ರಕ್ಷ್ ರಾಮ್ ಅವರೊಂದಿಗೆ ಬರ್ಮಾ ಎಂಬ ಶೀರ್ಷಿಕೆಯ ಸಿನಿಮಾ ಮಾಡುತ್ತಿದ್ದಾರೆ.  ಈ ಕಮರ್ಷಿಯಲ್ ಎಂಟರ್‌ಟೈನರ್‌ನ ಮೊದಲ ಶೆಡ್ಯೂಲ್ ಇತ್ತೀಚೆಗೆ ಮಂಗಳೂರಿನಲ್ಲಿ ಮುಗಿದಿದೆ.

ಬರ್ಮಾ ಸಿನಿಮಾ ಮುಗಿದ ನಂತರ ಧೀರೆನ್ ಜೊತೆ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಧೀರೆನ್ ಅವರ ಎರಡನೇ ಚಿತ್ರವು ಫ್ಯಾಮಿಲಿ ಎಂಟರ್ಟೈನರ್ ಎಂದು ನಿರೀಕ್ಷಿಸಲಾಗಿದೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಪ್ರಾರಂಭಿಸಲು ತಯಾರಕರು ಯೋಜಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.