ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ 'ಬ್ಲಿಂಕ್' ಚಿತ್ರದ ಎರಡನೇ ಹಾಡು 'ಸಖಿಯೇ' ಬಿಡುಗಡೆ
ರಂಗಭೂಮಿ ಮತ್ತು ಸಿನಿಮಾ ಎರಡನ್ನೂ ಬೆಸೆದು ಸಿನಿಮಾ ಮಾಡುವ ತಮ್ಮ ಕನಸಿನ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಸ್ನೇಹಿತರು ಮತ್ತು ರಂಗಭೂಮಿ ಸಮುದಾಯದ ಬೆಂಬಲದಿಂದ ಈ ಚಿತ್ರಕ್ಕೆ ಜೀವ ಬಂದಿದೆ ಎಂದರು.

'ಬ್ಲಿಂಕ್' ವಿಶಿಷ್ಟ ಸಿನಿಮಾ ಮಾತ್ರವಲ್ಲ, ಇದು ವಿಜ್ಞಾನದ ಸ್ಪರ್ಶವನ್ನು ಹೊಂದಿದೆ ಎಂದು ದಿಯಾ ಮತ್ತು ದಸರಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಚಿತ್ರದ ಎರಡನೇ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.
'ಚಿತ್ರದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈಗ ನಾವು ಹೃದಯಸ್ಪರ್ಶಿ ಮೆಲೋಡಿ ಹಾಡು ಸಖಿಯೇ ಅನ್ನು ಬಿಡುಗಡೆ ಮಾಡಿದ್ದೇವೆ' ಎಂದರು
ರಂಗಭೂಮಿ ಮತ್ತು ಸಿನಿಮಾ ಎರಡನ್ನೂ ಬೆಸೆದು ಸಿನಿಮಾ ಮಾಡುವ ತಮ್ಮ ಕನಸಿನ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಸ್ನೇಹಿತರು ಮತ್ತು ರಂಗಭೂಮಿ ಸಮುದಾಯದ ಬೆಂಬಲದಿಂದ ಈ ಚಿತ್ರಕ್ಕೆ ಜೀವ ಬಂದಿದೆ ಎಂದರು.
'ಬ್ಲಿಂಕ್ ಮಧ್ಯಮ ವರ್ಗದ ಪ್ರೇಕ್ಷಕರಿಗೆ ಅನುಗುಣವಾಗಿರುತ್ತದೆಯಾದರೂ, ಇದು ಹಲವು ಆಶ್ಚರ್ಯಗಳಿಂದ ತುಂಬಿರುತ್ತದೆ. ಈ ಸಿನಿಮಾವು ಟಿಪಿಕಲ್ ಪ್ರಕಾರವಲ್ಲ; ಅನಿರೀಕ್ಷಿತ ಘಟನೆಗಳು ಮಧ್ಯಮ ವರ್ಗದ ಹುಡುಗನ ಜಗತ್ತನ್ನು ಹೇಗೆ ಪರಿವರ್ತಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ' ಎನ್ನುತ್ತಾರೆ ಅವರು.
ನಾಯಕಿಯಾಗಿ ನಟಿಸಿರುವ ಮಂದಾರ ಬಟ್ಟಲಹಳ್ಳಿ ಮಾತನಾಡಿ, ಈ ಚಿತ್ರದಲ್ಲಿ ನಾನು ಸಾಮಾನ್ಯ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಲೂಸಿಯಾ, ಬೆಲ್ ಬಾಟಮ್ ಮತ್ತು ರಂಗಿತರಂಗದಂತಹ ಚಿತ್ರಗಳ ನಂತರ 'ಬ್ಲಿಂಕ್' ಸಿನಿಮಾ ಕ್ರಾಂತಿಯನ್ನು ಹುಟ್ಟುಹಾಕುತ್ತದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
ರವಿಚಂದ್ರ ಎಜೆ ನಿರ್ಮಾಣದ ಬ್ಲಿಂಕ್‌ನಲ್ಲಿ ಚೈತ್ರಾ ಜೆ ಆಚಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸುರೇಶ್ ಅನಗಲ್ಲಿ ಮತ್ತು ವಜ್ರಧನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ ಶಾಸ್ತ್ರಿ ಮತ್ತು ಪ್ರಸನ್ನ ಕುಮಾರ್ ಅವರು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


