ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಹಿಂದಿ ಡಬ್ಬಿಂಗ್ ಹಕ್ಕು ಆಕರ್ಷಕ ಬೆಲೆಗೆ ಮಾರಾಟ
ನಿರ್ದೇಶಕ ಸೂರಿ ತಮ್ಮ ಚಿತ್ರಗಳ ಮೂಲಕ ಯಾವಾಗಲೂ ತೀವ್ರ ನಿರೀಕ್ಷೆಯನ್ನು ಹುಟ್ಟುಹಾಕುತ್ತಾರೆ. ಇದೀಗ ಅವರ ಮುಂಬರುವ ಚಲನಚಿತ್ರ ಬ್ಯಾಡ್ ಮ್ಯಾನರ್ಸ್ ಕೂಡ ಈ ಪಟ್ಟಿಗೆ ಸೇರಿದೆ. ಚಿತ್ರತಂಡ ಈ ತಿಂಗಳಿನಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳು ಆಕರ್ಷಕ ಬೆಲೆಗೆ ಮಾರಾಟವಾಗಿವೆ.

ನಿರ್ದೇಶಕ ಸೂರಿ ತಮ್ಮ ಚಿತ್ರಗಳ ಮೂಲಕ ಯಾವಾಗಲೂ ತೀವ್ರ ನಿರೀಕ್ಷೆಯನ್ನು ಹುಟ್ಟುಹಾಕುತ್ತಾರೆ. ಇದೀಗ ಅವರ ಮುಂಬರುವ ಚಲನಚಿತ್ರ ಬ್ಯಾಡ್ ಮ್ಯಾನರ್ಸ್ ಕೂಡ ಈ ಪಟ್ಟಿಗೆ ಸೇರಿದೆ. ಚಿತ್ರತಂಡ ಈ ತಿಂಗಳಿನಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳು ಆಕರ್ಷಕ ಬೆಲೆಗೆ ಮಾರಾಟವಾಗಿವೆ. ಚಿತ್ರತಂಡ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇದು ವಿಶೇಷವಾಗಿ ಉದಯೋನ್ಮುಖ ಪ್ರತಿಭೆ ಅಭಿಷೇಕ್ ಅಂಬರೀಷ್ಗೆ ಲಾಭದಾಯಕ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಈ ಹಿಂದೆ 'ಅಮರ್' ಚಿತ್ರದಲ್ಲಿ ನಟಿಸಿದ್ದರು.
ಮಂಗಳವಾರವಷ್ಟೇ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದ್ದು, ನಟ ಅಭಿಷೇಕ್ ಅಂಬರೀಶ್ ಮತ್ತು ರಚಿತಾ ರಾಮ್ ಅವರು ಅಂದೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 'ಐ ಲವ್ ಯೂ, ಮೇದಿನಿ' ಎಂಬ ರೊಮ್ಯಾಂಟಿಕ್ ಟ್ರ್ಯಾಕ್ಗೆ ಯೋಗರಾಜ್ ಭಟ್ ಅವರ ಸಾಹಿತ್ಯ ಮತ್ತು ಚರಣ್ ರಾಜ್ ಅವರ ಸಂಗೀತ ಸಂಯೋಜನೆ ಇದೆ. ಚರಣ್ರಾಜ್ ಅವರೇ ಹಾಡಿಗೆ ದನಿಯಾಗಿದ್ದಾರೆ. ಈ ಹಾಡಿಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರವು ಈ ಹಿಂದೆ ಸಾರಾಯಿ ಕುಡುದ್ರೆ ಮತ್ತು ಓಗ ಓಗಾ ಸೇರಿದಂತೆ ಮೂರು ಹಾಡುಗಳನ್ನು ಬಿಡುಗಡೆ ಮಾಡಿತ್ತು. ಈ ಎಲ್ಲಾ ಹಾಡುಗಳಿಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದ್ದು, ಸೂರಿ ಅವರ ಸಾಮಾನ್ಯ ಶೈಲಿಯಲ್ಲಿ ತಯಾರಾಗಿದೆ. ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಸುಧೀರ್ ಕೆಎಂ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಶೇಖರ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


