ಸಿನಿಮಾ ಸುದ್ದಿ

ಸೆಟ್ಟೇರಿದ ಹೊಸಬರ ಸಿನಿಮಾ 'ಜರ್ನಿ'; ಕಿರುತೆರೆಯಿಂದ ಬೆಳ್ಳಿತೆರೆಗೆ ನಿರ್ದೇಶಕ ಅಗ್ನಿ ಪದಾರ್ಪಣೆ

ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಟ ಅಗ್ನಿ ಇದೀಗ 'ಜರ್ನಿ' ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

ಸೆಟ್ಟೇರಿದ ಹೊಸಬರ ಸಿನಿಮಾ 'ಜರ್ನಿ'; ಕಿರುತೆರೆಯಿಂದ ಬೆಳ್ಳಿತೆರೆಗೆ ನಿರ್ದೇಶಕ ಅಗ್ನಿ ಪದಾರ್ಪಣೆ
ನಿರ್ದೇಶಕ ಅಗ್ನಿ ಮತ್ತು ದಿನಿ
Published On :

ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಹೊಸಬರು ಬರುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಹಲವರು ಗುಣಮಟ್ಟದ ಕಂಟೆಂಟ್​ವುಳ್ಳ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಇದೀಗ ಅಂತದ್ದೇ ಸಾಲಿಗೆ ಸೇರುತ್ತಿದೆ 'ಜರ್ನಿ' ಸಿನಿಮಾ ತಂಡ. 

ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಟ ಅಗ್ನಿ ಇದೀಗ 'ಜರ್ನಿ' ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. 
ನಿರ್ದೇಶಕರ ಪ್ರಕಾರ, ಐವರು ಸ್ನೇಹಿತರ ಕಥೆ ಇದಾಗಿದ್ದು, ಕಾಲೇಜು ನಂತರದ ದಿನಗಳನ್ನು ಇಟ್ಟುಕೊಂಡು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರಾರಂಭದಿಂದ ಕ್ಲೈಮ್ಯಾಕ್ಸ್‌ವರೆಗೆ ಮನರಂಜನೆಯ ಭರವಸೆ ನೀಡುತ್ತಾರೆ.

'ಇದು ಹಾಸ್ಯ ಮತ್ತು ಭಾವನೆಗಳನ್ನು ಬೆರೆಸುವ ರೋಮಾಂಚಕ ಮನರಂಜನೆಯಾಗಲಿದೆ. ಚಿತ್ರದ ನಿರೂಪಣೆಯು ಅದ್ಭುತವಾಗಿ ರೂಪುಗೊಂಡಿದೆ. ಹಾಸನ ಮತ್ತು ಬೆಂಗಳೂರಿನಂತಹ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ' ಎಂದು ಅಗ್ನಿ ಹೇಳುತ್ತಾರೆ. 

ಚಿತ್ರವನ್ನು ಹರಿಪ್ರಸಾದ್ ನಾಯಕ್ ನಿರ್ಮಾಣ ಮಾಡಲಿದ್ದು, ಶಶಾಂಕ್ ಶೇಷಗಿರಿ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಡಿಸೆಂಬರ್ ಆರಂಭದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರದ ತಾರಾಗಣ ಮತ್ತು ಉಳಿದ ತಂತ್ರಜ್ಞರನ್ನು ಬಹಿರಂಗಪಡಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.