ಸಿನಿಮಾ ಸುದ್ದಿ

Bigg Boss Kannada 10: ಕೈ ಹಿಡಿಯದ ಅದೃಷ್ಟ, ಕ್ಯಾಪ್ಟನ್ ಆಗಿದ್ದರೂ ಮನೆಯಿಂದ ನೀತು ವನಜಾಕ್ಷಿ ಔಟ್!

ಕ್ಯಾಪ್ಟನ್ ಆದವರು ನಾಮಿನೇಷನ್‌ನಿಂದ ಬಚಾವ್ ಆಗಬಹುದು. ಆದರೆ ಎಲಿಮಿನೇಷನ್‌ನಿಂದ ಅಲ್ಲ ಎಂಬುದನ್ನು ಈ ವಾರದ ಎಲಿಮಿನೇಷನ್‌ನಿಂದ ಸಾಬೀತಾಗಿದೆ. ಕಳೆದ ವಾರ ನಾಮಿನೇಟ್ ಆಗಿದ್ದ ನೀತು ವನಜಾಕ್ಷಿ ಅವರು, ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ, ವೀಕ್ಷಕರಿಂದ ಕಡಿಮೆ ಓಟ್ ಬಂದ ಹಿನ್ನೆಲೆಯಲ್ಲಿ ಇದೀಗ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ.

Bigg Boss Kannada 10: ಕೈ ಹಿಡಿಯದ ಅದೃಷ್ಟ, ಕ್ಯಾಪ್ಟನ್ ಆಗಿದ್ದರೂ ಮನೆಯಿಂದ ನೀತು ವನಜಾಕ್ಷಿ ಔಟ್!
ನೀತು ವನಜಾಕ್ಷಿ
Published On :

ಬೆಂಗಳೂರು: ಕ್ಯಾಪ್ಟನ್ ಆದವರು ನಾಮಿನೇಷನ್‌ನಿಂದ ಬಚಾವ್ ಆಗಬಹುದು. ಆದರೆ ಎಲಿಮಿನೇಷನ್‌ನಿಂದ ಅಲ್ಲ ಎಂಬುದನ್ನು ಈ ವಾರದ ಎಲಿಮಿನೇಷನ್‌ನಿಂದ ಸಾಬೀತಾಗಿದೆ. ಕಳೆದ ವಾರ ನಾಮಿನೇಟ್ ಆಗಿದ್ದ ನೀತು ವನಜಾಕ್ಷಿ ಅವರು, ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ, ವೀಕ್ಷಕರಿಂದ ಕಡಿಮೆ ಓಟ್ ಬಂದ ಹಿನ್ನೆಲೆಯಲ್ಲಿ ಇದೀಗ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ.

ಕಳೆದ ವಾರ ಕ್ಯಾಪ್ಟನ್ ಆಗಿದ್ದ ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿರಲಿಲ್ಲ. ಹಾಗೆಯೇ, ಅವರು ಮೈಕಲ್‌ ಅವರನ್ನು ನಾಮಿನೇಷನ್‌ನಿಂದ ಬಚಾವ್ ಮಾಡಿದ್ದರು. ಇನ್ನು, ತುಕಾಲಿ ಸಂತು ಕೂಡ ತಮಗಿದ್ದ ಒಂದು ವಿಶೇಷ ಅಧಿಕಾರದಿಂದ ವರ್ತೂರು ಸಂತೋಷ್ ಅವರನ್ನು ನಾಮಿನೇಷನ್‌ನಿಂದ ಸೇಫ್ ಮಾಡಿದ್ದರು. ಕೊನೆಗೆ ನೀತು ವನಜಾಕ್ಷಿ, ವಿನಯ್, ತುಕಾಲಿ ಸಂತು, ಸಂಗೀತಾ, ತನಿಷಾ, ನಮ್ರತಾ, ಸ್ನೇಹಿತ್, ಸಿರಿ, ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು.

ಶನಿವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್‌, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ವಿನಯ್ ಗೌಡ ಅವರನ್ನು ನಾಮಿನೇಷನ್‌ನಿಂದ ಸೇಫ್ ಆಗಿದ್ದರು.

ಭಾನುವಾರದ (ನ.26) ಸಂಚಿಕೆಯಲ್ಲಿ ನಮ್ರತಾ ಗೌಡ, 'ತುಕಾಲಿ' ಸಂತು, ಸ್ನೇಹಿತ್ ಅವರು ಸೇಫ್ ಆದರು. ಅಂತಿಮವಾಗಿ ಸಿರಿ ಮತ್ತು ನೀತು ಅವರು ಎಲಿಮಿನೇಷನ್‌ ಅಖಾಡದಲ್ಲಿ ಉಳಿದುಕೊಂಡರು. ಬಳಿಕ 'ಕಿಚ್ಚ' ಸುದೀಪ್ ಅವರು ನೀತು ಹೆಸರು ಹೇಳುವ ಮೂಲಕ, ಅವರ ಆಟ 50 ದಿನಗಳಿಗೆ ಅಂತ್ಯವಾಗಿ ಎಂಬುದನ್ನು ಘೋಷಿಸಿದರು.

ಎಲಿಮಿನೇಟ್ ಆದ ನೀತು ಅವರು, "ಕನ್ವರ್ಟ್‌ ಆಗುವ ಮೊದಲು ನನ್ನ ಬದುಕು ನರಕವೇ ಆಗಿತ್ತು. ಹೆಣ್ಣಾಗಿ ಫೀಲ್ ಮಾಡ್ತಿದ್ದೆ. ಹೊರಗಡೆ ಹುಡುಗನಾಗಿ ಕಾಣಿಸ್ತಿದ್ದೆ. ಅದು ನನಗೆ ಆ ರೀತಿ ಅನ್ನಿಸುತ್ತಿರಲಿಲ್ಲ. ಯಾವಾಗ ನನ್ನ ತಾಯಿ ನನ್ನನ್ನು ಒಪ್ಪಿಕೊಂಡರೋ ಆಗ ನನ್ನ ಹೊಸ ಜೀವನ ಶುರುವಾಯ್ತು. ಈಗ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡ್ತಿದ್ದೀನಿ. ಇಲ್ಲಿಯೂ ಪ್ರತಿಕ್ಷಣ ಎಂಜಾಯ್ ಮಾಡಿದ್ದೀನಿ. ಎಲ್ಲರಿಂದಲೂ ಪ್ರೀತಿ ಸಿಕ್ಕಿದೆ.. ಟ್ರಾನ್ಸ್‌ಜೆಂಡರ್‍ ಆಗಿರುವ ನನಗೆ ಈ ವೇದಿಕೆ ಕೊಟ್ಟಿದ್ದಕ್ಕೆ ಧನ್ಯವಾದ. ಎಲ್ಲರ ಪ್ರೀತಿ ನನಗೆ ನೂರಕ್ಕೆ ನೂರು ಸಿಕ್ಕಿದೆ. ಆ ಪ್ರೀತಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಖಷಿಯಿದೆ. ಎಲ್ಲರಿಂದಲೂ ಒಂದೊಂದು ವಿಷಯ ಕಲಿತಿದ್ದೀನಿ. ಇಲ್ಲಿನ ಒಂದೊಂದು ಕ್ಷಣವನ್ನೂ ನಾನು ಸೆಲೆಬ್ರೇಟ್ ಮಾಡಿದ್ದೀನಿ' ಎಂದು ಹೇಳಿದರು.

ಕ್ಯಾಪ್ಟನ್ ಆಗಿದ್ದ ನೀತು, ಎಲಿಮಿನೇಟ್ ಆದ ಹಿನ್ನೆಲೆಯಲ್ಲಿ ಮನೆಯಿಂದ ಹೊರಹೋಗುವ ಮುನ್ನ ಕ್ಯಾಪ್ಟನ್‌ನ ಜವಾಬ್ದಾರಿಯನ್ನು ಒಬ್ಬರಿಗೆ ನೇಮಿಸುವಂತೆ ನೀತು ಅವರಿಗೆ 'ಬಿಗ್‌ ಬಾಸ್' ಆದೇಶಿಸಿದರು. ಈ ವೇಳೆ ನೀತು ಅವರು, ಮೈಕಲ್ ಅವರನ್ನು ಮನೆಯ ಕ್ಯಾಪ್ಟನ್ ಆಗಿ ನೇಮಿಸಿ ಹೊರಬಂತರು. ಅಂದಹಾಗೆ, ನೀತು ಪ್ರಕಾರ, ಮುಂದಿನ ವಾರ ಸ್ನೇಹಿತ್ ಎಲಿಮಿನೇಟ್ ಆಗಲಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.