ಜೈಲರ್ ಯಶಸ್ಸಿನ ಬಳಿಕ ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವರಾಜ್ ಕುಮಾರ್?
ಮೊದಲ ಸಲ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರ ಮಾಡಿದ್ದರು, ಆ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಶಿವಣ್ಣನ ನಟನೆ, ಅವರ ಸ್ಟೈಲ್‌ಗೆ ಸಿನಿಪ್ರಿಯರು ಫಿದಾ ಆಗಿದ್ದರು.

ಮೊದಲ ಸಲ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರ ಮಾಡಿದ್ದರು, ಆ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಶಿವಣ್ಣನ ನಟನೆ, ಅವರ ಸ್ಟೈಲ್‌ಗೆ ಸಿನಿಪ್ರಿಯರು ಫಿದಾ ಆಗಿದ್ದರು.
ಈಗ ತಮಿಳು ಚಿತ್ರರಂಗದಿಂದ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದು ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಬಗೆಗಿನ ಸುದ್ದಿ. ಲೋಕೇಶ್ ಕನಗರಾಜ್ ಸಿನಿಮಾ ಮೂಲಕ ಹೊಸ ತಂತ್ರವನ್ನು ಕಂಡುಕೊಂಡಿರೋ ಕಮಲ್ ಹಾಸನ್ ಪರಭಾಷೆಯ ನಟರನ್ನು ತಮ್ಮ ಸಿನಿಮಾ ಕಡೆಗೆ ಸೆಳೆಯುತ್ತಿದ್ದಾರೆ.
ಕಮಲ್ ಹಾಸನ್ ತಮ್ಮ 233ನೇ ಸಿನಿಮಾದಲ್ಲಿ ನಟಿಸುವಂತೆ ಕನ್ನಡದ ನಟ ಶಿವಣ್ಣನಿಗೆ ಆಹ್ವಾನ ನೀಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ತಮಿಳು ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಕಮಲ್ ಹಾಸನ್ 233ನೇ ಸಿನಿಮಾವನ್ನು ಎಚ್.ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕನ್ನಡಿಗರಿಗೆ ಮತ್ತೊಂದು ಸರ್ಪ್ರೈಸ್ ಕೊಡಲಿದ್ದಾರೆ.
ಈ ಸಿನಿಮಾದಲ್ಲಿ ಕಮಲ್ ಹಾಸನ್‌ಗೆ ಶಿವಣ್ಣ ಸಾಥ್ ಕೊಡುತ್ತಿದ್ದಾರೆ ಅನ್ನೋ ಸುದ್ದಿ ತಮಿಳು ಚಿತ್ರರಂಗದಲ್ಲಿ ಓಡಾಡ್ತಿದೆ. ಶಿವರಾಜ್‌ಕುಮಾರ್ ಉಳಗನಾಯಗನ್ ಕಮಲ್ ಜೊತೆ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ರಜನಿಕಾಂತ್ ನಂತರ ಕಮಲ್ ಹಾಸನ್ ಜೊತೆ ಶಿವಣ್ಣ ಸ್ಕ್ರೀನ್ ಶೇರ್ ಮಾಡ್ತಿದ್ದಾರಂತೆ ಅನ್ನೋ ಸುದ್ದಿ ತಮಿಳುನಾಡು ಗಡಿ ದಾಟಿ ಕರ್ನಾಟಕಕ್ಕೂ ಬಂದಿದೆ. ಇದರ ಬಗ್ಗೆ ಕಮಲ್ ಹಾಸನ್ ಆಗಲಿ, ಶಿವಣ್ಣ ಆಗಲಿ, ಚಿತ್ರತಂಡವಾಗಲಿ ಮಾಹಿತಿ ಶೇರ್ ಮಾಡಿಲ್ಲ. ಆದರೆ, ಶಿವಣ್ಣ ಸಖತ್ ಪವರ್‌ಫುಲ್ ಕ್ಯಾರೆಕ್ಟರ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


