ಕಾಂತಾರ ಖ್ಯಾತಿಯ ಮಂಜುನಾಥ್ ನಾಗಬಾ ನಿರ್ದೇಶನದ 'ಗರುಡ ಪುರಾಣ' ಬಿಡುಗಡೆಗೆ ದಿನಾಂಕ ಫಿಕ್ಸ್
ಮಂಜುನಾಥ್ ಬಿ ನಾಗಬಾ ಬರೆದು ನಿರ್ದೇಶಿಸಿರುವ 'ಗರುಡ ಪುರಾಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಟಿವಿ ಧಾರಾವಾಹಿಗಳು ಮತ್ತು ರತ್ನನ್ ಪ್ರಪಂಚ ಮತ್ತು ಕಬ್ಜ ಮುಂತಾದ ಚಿತ್ರಗಳಿಗೆ ಆನ್‌ಲೈನ್ ಫಿಲ್ಮ್ ಎಡಿಟಿಂಗ್ ಡೆಸ್ಕ್‌ನಲ್ಲಿ ಕೆಲಸ ಮಾಡಿದ ಅನುಭವವನ್ನು ರಂಗಭೂಮಿ ಕಲಾವಿದ ಮಂಜುನಾಥ್ ಹೊಂದಿದ್ದಾರೆ.

ಮಂಜುನಾಥ್ ಬಿ ನಾಗಬಾ ಬರೆದು ನಿರ್ದೇಶಿಸಿರುವ 'ಗರುಡ ಪುರಾಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್ 3 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟಿವಿ ಧಾರಾವಾಹಿಗಳ ಹಿನ್ನೆಲೆ ಮತ್ತು ರತ್ನನ್ ಪ್ರಪಂಚ, ತಳವಾರ ಪೇಟೆ ಮತ್ತು ಕಬ್ಜ ಮುಂತಾದ ಸಿನಿಮಾಗಳಿಗೆ ಆನ್‌ಲೈನ್ ಫಿಲ್ಮ್ ಎಡಿಟಿಂಗ್ ಡೆಸ್ಕ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ರಂಗಭೂಮಿ ಕಲಾವಿದ ಮಂಜುನಾಥ್, ಇದೀಗ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ಸಿಂಧು ಕೆಎಂ ಮತ್ತು ಯೋಗೀಶ್ ಕುಮಾರ್ ಬಿಎಲ್ ನಿರ್ಮಾಣದ ಈ ಚಿತ್ರದಲ್ಲಿ ಮಂಜುನಾಥ್ ಸೇರಿದಂತೆ ಚೆಲುವರಾಜ್, ಸಂತೋಷ್ ಕರ್ಕಿ, ದಿಶಾ ಶೆಟ್ಟಿ, ಕಾಂಚನಾ ಮತ್ತು ಮಹೇಂದ್ರ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರತಂಡದ ಪ್ರಕಾರ, ಗರುಡ ಪುರಾಣ ಚಿತ್ರವು ಡಾರ್ಕ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಇದು ಪತ್ತೆಹಚ್ಚಲು ಸಾಧ್ಯವಾಗಿಲ್ಲದ ಲೈಂಗಿಕ ದೌರ್ಜನ್ಯಗಳು ಮತ್ತು ಸರಣಿ ಕೊಲೆ ಪ್ರಕರಣಗಳ ಸುತ್ತ ಸುತ್ತುತ್ತದೆ. ನಾಯಕರಲ್ಲಿ ಒಬ್ಬಾತ ಈ ಅಪರಾಧದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ಸಂಕಟದಿಂದ ಅವರು ಹೇಗೆ ಹೊರಬರುತ್ತಾರೆ ಎಂಬುದೇ ಚಿತ್ರದ ತಿರುಳು.
ಚಿತ್ರಕ್ಕೆ ಸುನೀಲ್ ಜಿಎನ್ ಅವರ ಛಾಯಾಗ್ರಹಣ, ಮಹೇಂದ್ರ ಗೌಡ ಅವರ ಸಂಭಾಷಣೆ ಇದೆ. ಇದರೊಂದಿಗೆ ರಾಕೇಶ್ ಆಚಾರ್ಯ ಸಂಗೀತ ಸಂಯೋಜನೆ ಮತ್ತು ಪುನಿತ್ ಆರ್ಯ ಅವರು ಸಾಹಿತ್ಯವನ್ನು ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


