ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಆಗಲಿದೆ ಸೌತ್ ಇಂಡಿಯನ್ ಹೀರೋ ಸಿನಿಮಾ!
ನರೇಶ್ ಕುಮಾರ್ ನಿರ್ದೇಶನದ ಇತ್ತೀಚಿನ ಸಿನಿಮಾ, ಸೌತ್ ಇಂಡಿಯನ್ ಹೀರೋ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದೆ. ಸಾರ್ಥಕ್, ಕಾಶಿಮಾ ರಫಿ, ಮತ್ತು ಊರ್ವಶಿ ಜಯನ್ ಅಭಿನಯದ ಕನ್ನಡ ಚಿತ್ರ ಫೆಬ್ರುವರಿ 24 ರಂದು ಬಿಡುಗಡೆಯಾಯಿತು.

ನರೇಶ್ ಕುಮಾರ್ ನಿರ್ದೇಶನದ ಇತ್ತೀಚಿನ ಸಿನಿಮಾ, ಸೌತ್ ಇಂಡಿಯನ್ ಹೀರೋ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿದೆ. ಸಾರ್ಥಕ್, ಕಾಶಿಮಾ ರಫಿ, ಮತ್ತು ಊರ್ವಶಿ ಜಯನ್ ಅಭಿನಯದ ಕನ್ನಡ ಚಿತ್ರ ಫೆಬ್ರುವರಿ 24 ರಂದು ಬಿಡುಗಡೆಯಾಯಿತು.
ಈಗ ಚಿತ್ರವು ತಮಿಳು, ತೆಲುಗು ಮತ್ತು ಮಲಯಾಳಂನಂತಹ ದಕ್ಷಿಣ ಭಾರತದ ಇತರ ಭಾಷೆಗಳಿಗೆ ಡಬ್ ಆಗಲು ಸಿದ್ಧವಾಗಿದೆ.
ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಸಾರ್ಥಕ್ ಮಾತನಾಡಿ, 'ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯೊಂದಿಗೆ, ಚಿತ್ರದ ಶೀರ್ಷಿಕೆಗೆ ತಕ್ಕಂತೆ ಸಿನಿಮಾವನ್ನು ನೋಡಬಹುದಾಗಿದೆ. ನಾನು ಈಗಾಗಲೇ ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಧಾರಾವಾಹಿಗಳನ್ನು ಮಾಡಿದ್ದೇನೆ. ಆದ್ದರಿಂದ ನನ್ನ ಮೊದಲ ಚಿತ್ರಕ್ಕೆ ಅದೇ ರೀತಿಯ ಮನ್ನಣೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳುತ್ತಾರೆ.
ಸೌತ್ ಇಂಡಿಯನ್ ಹೀರೋ ಎಂಬುದು ಸ್ಟಾರ್ ಡಮ್ ಬಗ್ಗೆ ಮಾತನಾಡುವ ಚಿತ್ರವಾಗಿದೆ.
ಇದನ್ನೂ ಓದಿ: 'ಸೌತ್ ಇಂಡಿಯನ್ ಹೀರೋ' ಚಿತ್ರ ಸೂಪರ್ಸ್ಟಾರ್ನ ಜೀವನದೊಳಗೆ ನಿಮ್ಮನ್ನು ಕರೆದೊಯ್ಯುತ್ತದೆ: ನಿರ್ದೇಶಕ ನರೇಶ್ ಕುಮಾರ್
'ಚಿತ್ರವು ನಿಮ್ಮನ್ನು ಸೂಪರ್ಸ್ಟಾರ್ನ ಜೀವನದೊಳಗೆ ಕರೆದೊಯ್ಯುತ್ತದೆ' ಎನ್ನುವ ಸಾರ್ಥಕ್, ಸ್ಟಾರ್ಡಮ್ನ ಪರಿಣಾಮಗಳನ್ನು ಅರಿತುಕೊಳ್ಳಲು ಈ ಚಿತ್ರ ಅವರಿಗೆ ನೆರವಾಗಿದೆಯೇ ಎಂದು ಕೇಳಿದಾಗ, 'ಸೌತ್ ಇಂಡಿಯನ್ ಹೀರೋ ನನಗೆ ಸೂಪರ್ಸ್ಟಾರ್ನ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಅದು ಅದರ ಏರಿಳಿತಗಳೊಂದಿಗೆ ಬರುತ್ತದೆ. ಇದು ಪರದೆಯ ಮೇಲೆ ಮತ್ತು ಹೊರಗೆ ಸ್ಟಾರ್ಗಳ ಜೀವನದ ಸೂಕ್ಷ್ಮ ವ್ಯತ್ಯಾಸಗಳನ್ನು ನನಗೆ ತೋರಿಸಿದೆ. ಎಲ್ಲಾ ರೀತಿಯ ಒತ್ತಡ ಮತ್ತು ಭಾವನಾತ್ಮಕ ಹತ್ಯಾಚಾರ ಇಲ್ಲದೆಯೇ ನಾನು ಮುಂದೊಂದು ದಿನ ಅಲ್ಲಿಗೆ ತಲುಪಲು ಆಶಿಸುತ್ತೇನೆ' ಎಂದು ಹೇಳಿದರು.
'ನನಗೆ ವಾಸ್ತವ ತಿಳಿಯಿತು. ಪ್ರತಿಯೊಬ್ಬ ನಾಯಕನು ಆ ಪ್ರೀತಿ ಮತ್ತು ಮೆಚ್ಚುಗೆಯನ್ನು ಬಯಸುತ್ತಾನೆ ಮತ್ತು ಅವನು ಆ ಸ್ಥಾನಕ್ಕೇರಿದಾಗ ಅವನು ಹೇಗೆ ಪರಿಸ್ಥಿತಿಗಳನ್ನು ನಿರ್ವಹಿಸುತ್ತಾನೆ ಎಂಬುದು ವಿಭಿನ್ನವಾಗಿರುತ್ತದೆ. ವೈಯಕ್ತಿಕ ಜೀವನವು ರಾಜಿಯಾಗುತ್ತದೆ ಮತ್ತು ಸ್ಪರ್ಧೆಯನ್ನು ನಿರ್ವಹಿಸಬೇಕು. ನನ್ನ ಕೆಲಸವನ್ನು ಪ್ರದರ್ಶಿಸಲು ನಾನು ಉತ್ತಮ ಸಿನಿಮಾ ಸಿಕ್ಕಿರಲಿಲ್ಲ. ಪಾತ್ರ ಮತ್ತು ಗೆಟ್ಅಪ್ಗಳು ನನಗೆ ಒಂದೇ ಚಿತ್ರದಲ್ಲಿ ಹತ್ತು ಚಿತ್ರಗಳನ್ನು ಮಾಡುತ್ತಿದ್ದೇನೆ ಅನಿಸಿತು' ಎಂದು ಹೇಳುತ್ತಾರೆ.
ಇದನ್ನೂ ಓದಿ: 'ರಾಜು ಕನ್ನಡ ಮೀಡಿಯಂ' ನಿರ್ದೇಶಕ ನರೇಶ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ 'ಅವನು ಮತ್ತು ಶ್ರಾವಣಿ' ನಟ ಸಾರ್ಥಕ್ ನಾಯಕ
'ಜನರ ಒಪ್ಪಿಗೆ ಮತ್ತು ಚಿತ್ರದ ಯಶಸ್ಸು ಈಗಾಗಲೇ ಒತ್ತಡವನ್ನು ಅನುಭವಿಸುವಂತೆ ಮಾಡಿದೆ. ಆದ್ದರಿಂದ ಅವರು ತಮ್ಮ ಮುಂದಿನ ಸಿನಿಮಾದ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲು ಬಯಸುತ್ತಾರೆ. 'ನನ್ನ ಸ್ವಂತ ಪ್ರೊಡಕ್ಷನ್ನಿಂದ ಒಂದು ಸೇರಿ, ಮೂರು ಪ್ರಾಜೆಕ್ಟ್ಗಳ ಚರ್ಚೆಯಲ್ಲಿ ತೊಡಗಿದ್ದೇನೆ. ಆದರೆ, ನನ್ನ ಮುಂದಿನ ಚಿತ್ರಕ್ಕೆ ಸಹಿ ಹಾಕುವ ಮೊದಲು ನನ್ನ ಎಲ್ಲಾ ಪ್ರಸ್ತುತ ಯೋಜನೆಗಳನ್ನು ಪೂರ್ಣಗೊಳಿಸಲು ನಾನು ಬಯಸುತ್ತೇನೆ' ಎಂದು ಹೇಳುತ್ತಾರೆ ಸಾರ್ಥಕ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


