ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಟಿಸಿರುವ 'ಟೋಬಿ' ಚಿತ್ರದ ಫಸ್ಟ್ ಲುಕ್ ರಿಲೀಸ್!

ಗರುಡ ಗಮನ ವೃಷಭ ವಾಹನದಂತಹ ಆಕ್ಷನ್ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ರಾಜ್‌ ಬಿ ಶೆಟ್ಟಿ ಇದೀಗ 'ಟೋಬಿ' ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆ.

ರಾಜ್ ಬಿ ಶೆಟ್ಟಿ ನಟಿಸಿರುವ 'ಟೋಬಿ' ಚಿತ್ರದ ಫಸ್ಟ್ ಲುಕ್ ರಿಲೀಸ್!
ಟೋಬಿ ಚಿತ್ರದ ಫಸ್ಟ್ ಲುಕ್
Published On :

ಗರುಡ ಗಮನ ವೃಷಭ ವಾಹನದಂತಹ ಆಕ್ಷನ್ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ರಾಜ್‌ ಬಿ ಶೆಟ್ಟಿ ಇದೀಗ 'ಟೋಬಿ' ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆ.

ರಾಜ್ ಬಿ ಶೆಟ್ಟಿ ನಟಿಸಿರುವ ಟೋಬಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಮಾರಿಗೆ ದಾರಿ ಮಾಡಿ ಕೊಡಿ ಎಂದು ರಾಜ್ ಬಿ ಶೆಟ್ಟಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಹಿಂದೆ 'ಟೋಬಿ' ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಚಿತ್ರದ ಫಸ್ಟ್ ಲುಕ್ ನಲ್ಲಿ ರಾಜ್‌ ಬಿ ಶೆಟ್ಟಿ ರೊಚ್ಚಿಗೆದ್ದ ಟಗರಿನಂತೆ ಮೂಗಿಗೆ ದೊಡ್ಡದೊಂದು ಮೂಗುತಿ, ರಕ್ತದ ಕಲೆಗಳನ್ನು ಹೊತ್ತು ಬಂದಿದ್ದಾರೆ.

ಆಗಸ್ಟ್​ 25ರಂದು 'ಟೋಬಿ' ಚಿತ್ರ ತೆರೆ ಕಾಣಲಿದ್ದು ಚಿತ್ರದ ಮೂಲ ಕಥೆ ಟಿ.ಕೆ ದಯಾನಂದ್ ಅವರದ್ದಾಗಿದೆ. ಚಿತ್ರವನ್ನು ಬಾಸಿಲ್​ ನಿರ್ದೇಶಿಸುತ್ತಿದ್ದಾರೆ. 

'ಲೈಟರ್​ ಬುದ್ಧ ಫಿಲ್ಮ್ಸ್'​ನಡಿ 'ಗರುಡ ಗಮನ ವೃಷಭ ವಾಹನ' ಚಿತ್ರ ನಿರ್ಮಾಣವಾಗಿತ್ತು. ಅದೇ ಬ್ಯಾನರ್​ನಲ್ಲಿ ರವಿ ರೈ ಕಳಸ 'ಟೋಬಿ'ಯನ್ನು ನಿರ್ಮಾಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.