ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ ವಾಸ್ಕೋಡಿಗಾಮ ಚಿತ್ರದ ನಾಯಕಿ ಪಾರ್ವತಿ ನಾಯರ್!
ಸದ್ಯ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪಾರ್ವತಿ ನಾಯರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ವಾಸ್ಕೋಡಿಗಾಮ ಚಿತ್ರದ ನಿರ್ದೇಶಕ ಮಧು ಚಂದ್ರ ಅವರೊಂದಿಗೆ ಮತ್ತೊಮ್ಮೆ ಮಿ. ರಾಣಿ ಎಂಬ ತಾತ್ಕಾಲಿಕ ಶೀರ್ಷಿಕೆಯ ಕಾಮಿಡಿ-ಡ್ರಾಮಾದಲ್ಲಿ ನಟಿಸುತ್ತಿದ್ದಾರೆ.

ಸದ್ಯ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪಾರ್ವತಿ ನಾಯರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ವಾಸ್ಕೋಡಿಗಾಮ ಚಿತ್ರದ ನಿರ್ದೇಶಕ ಮಧು ಚಂದ್ರ ಅವರೊಂದಿಗೆ ಮತ್ತೊಮ್ಮೆ ಮಿ. ರಾಣಿ ಎಂಬ ತಾತ್ಕಾಲಿಕ ಶೀರ್ಷಿಕೆಯ ಕಾಮಿಡಿ-ಡ್ರಾಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಪಾರ್ವತಿ ಈ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಮಾತುಕತೆಯಲ್ಲಿ, 'ಕೆಲವು ಗಂಭೀರ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ವಿರಾಮ ತೆಗೆದುಕೊಂಡು ಕಾಮಿಡಿ ಜಗತ್ತನ್ನು ಅನ್ವೇಷಿಸುವ ಅಗತ್ಯದ ಅನುಭವ ನನಗಾಯಿತು. 'ಚಿತ್ರದ ಸ್ಕ್ರಿಪ್ಟ್ ನನ್ನನ್ನು ಮತ್ತೊಮ್ಮೆ ವಾಸ್ಕೋಡಿಗಾಮ ನಿರ್ದೇಶಕರೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿತು ಮತ್ತು ನಾನು ಮಿ. ರಾಣಿಯಲ್ಲಿ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ಆನಂದಿಸಿದೆ' ಎಂದು ಹೇಳುತ್ತಾರೆ. ಅವರು ಕೊನೆಯದಾಗಿ ಹಿಂದಿ ಚಲನಚಿತ್ರ 83 ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ನಿರ್ಮಿಸಿರುವ ಮಿಸ್ಟರ್. ರಾಣಿ ಸಿನಿಮಾದಲ್ಲಿ ವೆಬ್ ಸರಣಿಯ ಭಾಗವಾಗಿರುವ ರಂಗಭೂಮಿ ಕಲಾವಿದ ದೀಪಕ್ ಅವರು ಪಾರ್ವತಿ ಅವರಿಗೆ ಜೋಡಿಯಾಗಿದ್ದಾರೆ. ಚಿತ್ರತಂಡ ಜೂಡಾ ಸ್ಯಾಂಡಿ ಅವರನ್ನು ಸಂಗೀತ ನಿರ್ದೇಶಕರಾಗಿ ಅಂತಿಮಗೊಳಿಸಿದ್ದಾರೆ.
ಈಮಧ್ಯೆ, ಮತ್ತೊಂದು ಕನ್ನಡ ಸಿನಿಮಾಗಾಗಿ ಮಾತುಕತೆ ನಡೆಸುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಈ ಕುರಿತು ಮಾಹಿತಿ ನೀಡಲಿದ್ದೇನೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ ಒಂದೆರಡು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಈ ಮಧ್ಯೆ ತೆಲುಗಿನಲ್ಲಿಯೂ ಹಲವಾರು ಆಫರ್‌ಗಳನ್ನು ಸ್ವೀಕರಿಸಿದ್ದೇನೆ. ಆದರೆ, ಸರಿಯಾದ ಯೋಜನೆಯೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಬಯಸುತ್ತೇನೆ. 83 ಸಿನಿಮಾ ನಂತರ ನಾನು ಹಿಂದಿಯಲ್ಲಿ ಉತ್ತಮ ಅವಕಾಶಗಳನ್ನು ಅನ್ವೇಷಿಸುತ್ತಿದ್ದೇನೆ' ಎಂದು ಪಾರ್ವತಿ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


