ಸಿನಿಮಾ ಸುದ್ದಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಉಪಾಸನಾ; ರಾಮ್ ಚರಣ್ ಕುಟುಂಬದಲ್ಲಿ ಸಂತಸ!

ಸೆಲೆಬ್ರಿಟಿ ದಂಪತಿಗಳಾದ ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಮಂಗಳವಾರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಉಪಾಸನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದಲ್ಲಿ ಸಂತಸ ಮನೆಮಾಡಿದೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಉಪಾಸನಾ; ರಾಮ್ ಚರಣ್ ಕುಟುಂಬದಲ್ಲಿ ಸಂತಸ!
ರಾಮ್ ಚರಣ್ - ಉಪಾಸನಾ ಕಾಮಿನೇನಿ
Published On :

ಹೈದರಾಬಾದ್: ಸೆಲೆಬ್ರಿಟಿ ದಂಪತಿಗಳಾದ ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಮಂಗಳವಾರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಉಪಾಸನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದಲ್ಲಿ ಸಂತಸ ಮನೆಮಾಡಿದೆ.

Story image

ಈ ಸುದ್ದಿಯನ್ನು ದೃಢೀಕರಿಸಿದ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಎಎನ್‌ಐಗೆ ಮಾಹಿತಿ ನೀಡಿ, ಜೂನ್ 20ರ ನಸುಕಿನ ವೇಳೆಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದಿದ್ದಾರೆ.

ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿರುವ ಮೆಡಿಕಲ್ ಬುಲೆಟಿನ್ ಕೂಡ ವೈರಲ್ ಆಗಿದ್ದು, ಮಗುವಿನ ಆಗಮನವನ್ನು ಖಚಿತಪಡಿಸಿದೆ.

Story image

'ಉಪಾಸನಾ ಕಾಮಿನೇನಿ ಕೊನಿಡೇಲಾ ಮತ್ತು ರಾಮ್ ಚರಣ್ ಕೊನಿಡೇಲಾ ಅವರು 20 ಜೂನ್ 2023 ರಂದು ಹೈದರಾಬಾದ್‌ನ ಅಪೋಲೋ ಆಸ್ಪತ್ರೆ ಜುಬಿಲಿ ಹಿಲ್ಸ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ' ಎಂದು ಬುಲೆಟಿನ್ ತಿಳಿಸಿದೆ.

ಈ ಅಪ್‌ಡೇಟ್ ಅಭಿಮಾನಿಗಳು ಮತ್ತು ಚಿತ್ರರಂಗದ ಸದಸ್ಯರನ್ನು ಹರ್ಷಗೊಳಿಸಿದೆ. ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ರಾಕುಲ್ ಪ್ರೀತ್ ಈ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. 'Wohooooo ಅಭಿನಂದನೆಗಳು ರಾಮ್‌ ಚರಣ್ ಮತ್ತು ಉಪಾಸನಾ! ಮಗುವಿಗೆ ಎಲ್ಲಾ ಪ್ರೀತಿ ಮತ್ತು ಸಂತೋಷದಿಂದ ಆಶೀರ್ವದಿಸಲಿ' ಎಂದು ಬರೆದಿದ್ದಾರೆ.

ರಾಮ್ ಮತ್ತು ಉಪಾಸನಾ 2012ರ ಜೂನ್ 14ರಂದು ವಿವಾಹವಾದರು. ಇಬ್ಬರೂ ಡಿಸೆಂಬರ್ 2022ರಲ್ಲಿ ತಾವು ತಂದೆ-ತಾಯಿ ಆಗುತ್ತಿರುವುದಾಗಿ ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.