ಕಿಚ್ಚನ 46ನೇ ಚಿತ್ರಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ: ತಮಿಳಿನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ನಿರ್ದೇಶನ?
ಕಿಚ್ಚ ಸುದೀಪ್ ಅವರು 46ನೇ ಚಿತ್ರವನ್ನು ತಮಿಳು ನಿರ್ಮಾಪಕ ಕಲೈಪ್ಪುಲಿ ತನು ನಿರ್ಮಿಸುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅದರ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗುವ ಚಿತ್ರವನ್ನು ಚೊಚ್ಚಲ ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಚ್ಚ ಸುದೀಪ್ ಅವರು 46ನೇ ಚಿತ್ರವನ್ನು ತಮಿಳು ನಿರ್ಮಾಪಕ ಕಲೈಪ್ಪುಲಿ ತನು ನಿರ್ಮಿಸುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅದರ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗುವ ಚಿತ್ರವನ್ನು ಚೊಚ್ಚಲ ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿಚ್ಚ ಸುದೀಪ್ ಅವರಿಗೆ ಕಥೆ ಬಹಳ ಇಷ್ಟವಾಗಿ ನಟಿಸಲು ಒಪ್ಪಿಕೊಂಡಿದ್ದು ಈ ತಿಂಗಳಿನಲ್ಲಿಯೇ 46ನೇ ಚಿತ್ರಕ್ಕೆ ಮುಹೂರ್ತ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಚಿತ್ರದ ಪಾತ್ರಧಾರಿಗಳು ಮತ್ತು ತಂಡದ ಬಗ್ಗೆ ಮಾಹಿತಿ ಸಿಗದಿದ್ದರೂ ಕೂಡ ಹ್ಯಾರಿಸ್ ಜಯರಾಜ್ ಮತ್ತು ಯುವ ಶಂಕರ್ ರಾಜಾ ಅವರ ಹೆಸರುಗಳು ಕೇಳಿಬರುತ್ತಿವೆ. ಚಿತ್ರಕ್ಕೆ ಕನ್ನಡದ ಉತ್ತಮ ತಂತ್ರಜ್ಞರನ್ನು ಬಳಸಿಕೊಳ್ಳಲು ತಂಡ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.
ಸುದೀಪ್ ಅವರ ವಿಕ್ರಾಂತ್ ರೋಣಕ್ಕೆ ಸಂಗೀತ ರಚನೆ ಮಾಡಿದ್ದ ಅಜನೀಶ್ ಲೋಕನಾಥ್ ಮತ್ತೊಮ್ಮೆ 46ನೇ ಚಿತ್ರಕ್ಕೆ ಕೂಡ ಜೊತೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಕಲಾ ನಿರ್ದೇಶಕ ಶಿವಕುಮಾರ್ ಮತ್ತು ಛಾಯಾಗ್ರಾಹಕ ಶೇಖರ್ ಚಂದ್ರ ಜೊತೆಯಾಗಬಹುದು.
ಸದ್ಯದಲ್ಲಿಯೇ ಚಿತ್ರತಂಡ ಅಧಿಕೃತವಾಗಿ ಎಲ್ಲವನ್ನೂ ಘೋಷಣೆ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ ಸುದೀಪ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ ಬಿಲ್ಲಾ ರಂಗ ಬಾಷಾ ಚಿತ್ರದ ಕೆಲಸ ನಡೆಯುತ್ತಿದೆ. ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


