ಶಾನ್ವಿ ಶ್ರೀವಾಸ್ತವ, ರಘು ದೀಕ್ಷಿತ್ ಅಭಿನಯದ 'ಬ್ಯಾಂಗ್' ಬಿಡುಗಡೆಗೆ ಸಿದ್ಧ; ಕಿಚ್ಚ ಸುದೀಪ್ ಧ್ವನಿ!
ಗಣೇಶ್ ಪರಶುರಾಮ್ ನಿರ್ದೇಶನದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ಬ್ಯಾಂಗ್ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಇದಕ್ಕೂ ಮುನ್ನ ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದೆ.

ಗಣೇಶ್ ಪರಶುರಾಮ್ ನಿರ್ದೇಶನದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ಬ್ಯಾಂಗ್ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಇದಕ್ಕೂ ಮುನ್ನ ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದೆ. ಶಾನ್ವಿ ಶ್ರೀವಾಸ್ತವ್ ಮತ್ತು ರಘು ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡುವ ಮೂಲಕ ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ನಿರ್ದೇಶಕ ಗಣೇಶ್ ಮಾತನಾಡಿ, 'ನಾವು ತಂಡವಾಗಿ ಬೆಳ್ಳಿತೆರೆಯಲ್ಲಿ ಈ ಸ್ಟಾರ್ ನಟನನ್ನು ನೋಡುತ್ತಾ ಬೆಳೆದಿದ್ದೇವೆ. ಅವರ ಸಿನಿಮಾಗಳನ್ನು ಮೊದಲ ದಿನ, ಮೊದಲ ಶೋವನ್ನು ಕಿಕ್ಕಿರಿದ ಥಿಯೇಟರ್‌ಗಳಲ್ಲಿ ನೋಡುವುದು ಮತ್ತು ತೆರೆ ಮೇಲೆ ಅವರು ಕಾಣಿಸಿಕೊಳ್ಳುತ್ತಿದ್ದಂತೆಯೇ ಮೆಚ್ಚುಗೆಯ ಶಿಳ್ಳೆ ಹೊಡೆದಿದ್ದೇವೆ. ಅಂತವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿರುವುದು ಸಂಪೂರ್ಣ ಕನಸು ನನಸಾದಂತಾಗಿದೆ. ಬ್ಯಾಂಗ್ ಸಿನಿಮಾದಲ್ಲಿ ಅವರ ಧ್ವನಿಯನ್ನು ಕೇಳಲು ಅವರ ಅಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ ಸಂಗೀತ ನೀಡಿರುವ ರಿತ್ವಿಕ್ ಮುರಳೀಧರ್ ಚಿತ್ರದಲ್ಲಿ ನಟಿಸಿದ್ದು, ಸುನೀಲ್ ಗುಜ್ಜರ್ ಮತ್ತು ನಾಟ್ಯ ರಂಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬ್ಯಾಂಗ್ ಸಿನಿಮಾಗೆ ಉದಯ ಲೀಲಾ ಅವರ ಛಾಯಾಗ್ರಹಣ, ವಿಜಯ್ ಚಂದ್ರ ಅವರ ಸಂಕಲನ ಮತ್ತು ನವೀನ್ ಕುಮಾರ್ ಧ್ವನಿ ವಿನ್ಯಾಸ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


