ಸಿನಿಮಾ ಸುದ್ದಿ

ಮತ್ತೊಮ್ಮೆ ಕ್ರೇಜಿಸ್ಟಾರ್ ಜೊತೆಗೂಡಿದ ನಟಿ ಅಪೂರ್ವ

ರವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ ಬದಲಾವಣೆಗಳ ಮೂಲಕ ಸಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರಕ್ಕೆ ಇದೀಗ ಗೌರಿ ಶಂಕರ ಎಂದು ಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್‌ಗುಪ್ತಾ ಅವರ ಬದಲಿಗೆ ಚಿತ್ರದಲ್ಲಿ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ.

ಮತ್ತೊಮ್ಮೆ ಕ್ರೇಜಿಸ್ಟಾರ್ ಜೊತೆಗೂಡಿದ ನಟಿ ಅಪೂರ್ವ
ನಟಿ ಅಪೂರ್ವ
Published On :

ರವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ ಬದಲಾವಣೆಗಳ ಮೂಲಕ ಸಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರಕ್ಕೆ ಇದೀಗ ಗೌರಿ ಶಂಕರ ಎಂದು ಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್‌ಗುಪ್ತಾ ಅವರ ಬದಲಿಗೆ ಚಿತ್ರದಲ್ಲಿ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ.

ಈ ಹಿಂದೆ ಅಪೂರ್ವ ಅವರು ಕ್ರೇಜಿಸ್ಟಾರ್ ರವಿಚಂದ್ರ ಅವರ ಅಪೂರ್ವ ಚಿತ್ರದಲ್ಲಿ ನಟಿಸಿದ್ದರು, ಈ ಚಿತ್ರ ಅಪೂರ್ವ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತ್ತು. ಇದೀಗ ಮರಳಿ ಕ್ರೇಜಿಸ್ಟಾರ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ವಿಕ್ಟರಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಪೂರ್ವ ಅವರು, ಚಿತ್ರೀಕರಣದ ಹಂತದಲ್ಲಿರುವ ಸೂತ್ರಧಾರಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ಗೌರಿ ಶಂಕರ ಚಿತ್ರದ ಚಿತ್ರೀಕರಣವು ಜನವರಿ 22 ರಂದು ದಾಂಡೇಲಿಯಲ್ಲಿ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಶೆಫರ್ಡ್ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದು, ಕ್ಯಾಡಬೊಮ್ ಹೇಡರ್ ಎಂಬ ಹೆಸರಿನಲ್ಲಿ ನಾಯಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಗೌರಿ ಶಂಕರ ಚಿತ್ರಕ್ಕೆ ಕಾರ್ತಿಕೇಯನ್ ಅವರ ಸಂಗೀತವಿರಲಿದ್ದು, ಸತೀಶ್ ಅವರ ಛಾಯಾಗ್ರಹಣವಿದೆ.

ಏತನ್ಮಧ್ಯೆ, ರವಿಚಂದ್ರನ್ ಅವರು ಮುಂದಿನ ದಿನಗಳಲ್ಲಿ ದರ್ಶನ್ ಅವರ ಕ್ರಾಂತಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರ ಗಣರಾಜ್ಯೋತ್ಸವ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ನಟ ಧ್ರುವರ್ಜಾ ನಟನೆಯ ಮುಂಬರುವ ಚಿತ್ರ ಕೆಡಿಯಲ್ಲಿಯೂ ರವಿಚಂದ್ರನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.