ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿಗೆ ಉಕ್ರೇನ್ ನಂಟು
2023ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ‘ಆರ್ಆರ್ಆರ್’ ಸಿನಿಮಾದ 'ನಾಟು ನಾಟು' ಹಾಡು ಉಕ್ರೇನ್ ಜೊತೆ ನಂಟು ಹೊಂದಿದೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್ನಲ್ಲಿ.

ಬೆಂಗಳೂರು: 2023ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ‘ಆರ್ಆರ್ಆರ್’ ಸಿನಿಮಾದ 'ನಾಟು ನಾಟು' ಹಾಡು ಉಕ್ರೇನ್ ಜೊತೆ ನಂಟು ಹೊಂದಿದೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್ನಲ್ಲಿ.
ಯುದ್ಧ ಶುರು ಆಗೋದಕ್ಕೂ ಮುನ್ನ ಕೀವ್ನಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರ ಅಧಿಕೃತ ನಿವಾಸದ ಹೊರಗೆ ಆಗಸ್ಟ್ 2021 ರಲ್ಲಿ 'ನಾತು ನಾಟು' ಹಾಡು ಚಿತ್ರೀಕರಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸುವ ಕೆಲವು ತಿಂಗಳುಗಳ ಮುನ್ನ ಈ ಹಾಡು ಚಿತ್ರೀಕರಿಸಲಾಗಿದೆ.
ತೆಲುಗಿನ 'ನಾಟು ನಾಟು' ಹಾಡಿಗೆ ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ.
ಮಾರ್ಚ್ 2022 ರಲ್ಲಿ 'ಆರ್ಆರ್ಆರ್' ಚಿತ್ರದ ಪ್ರಚಾರದ ಸಮಯದಲ್ಲಿ, ಉಕ್ರೇನ್ ನಲ್ಲಿ ಹಾಡಿನ ಚಿತ್ರೀಕರಣವನ್ನು ನೆನೆಪಿಸಿಕೊಂಡ ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ದುಃಖ ವ್ಯಕ್ತಪಡಿಸಿದ್ದರು. "ನಾವು ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲು ಅಲ್ಲಿಗೆ ಹೋಗಿದ್ದೆವು. ಈಗ ಅದು ಯುದ್ಧದ ರೂಪ ಪಡೆಯಬಹುದು ಎಂಬ ಅಂದಾಜು ಇರಲಿಲ್ಲ. ಈಗ ನಾನು ಹಿಂತಿರುಗಿ ನೋಡಿದಾಗ ಆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು" ಎಂದು ಹೇಳಿದ್ದರು.
ಇದನ್ನು ಓದಿ: 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ; ಮಾತೇ ಬರುತಿಲ್ಲ, ಸಂಗೀತಕ್ಕೆ ಗಡಿಯಿಲ್ಲ ಎಂದ ರಾಜಮೌಳಿ
ಉಕ್ರೇನ್-ರಷ್ಯಾ ಯುದ್ಧ ಶುರುವಾದ ನಂತರ ಅಲ್ಲಿನ ವಾತಾವರಣ ತುಂಬ ಭೀಕರವಾಯಿತು. ಜನರು ಪ್ರಾಣ ಉಳಿಸಿಕೊಳ್ಳಲು ಸಖತ್ ಕಷ್ಟಪಟ್ಟರು. ಉಕ್ರೇನ್ನ ಬೃಹತ್ ಕಟ್ಟಡಗಳ ಮೇಲೆ ಬಾಂಬ್ ದಾಳಿ ಮಾಡಲಾಯಿತು. ನಗರಗಳು ನೆಲಸಮವಾದವು. ಅಂಥ ಪರಿಸ್ಥಿತಿ ನಿರ್ಮಾಣ ಆಗುವುದಕ್ಕೂ ಮುನ್ನ ‘ಆರ್ಆರ್ಆರ್’ ಚಿತ್ರತಂಡ ಅಲ್ಲಿ ಶೂಟಿಂಗ್ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


