ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ 'ಕಾಂತಾರ' ಇನ್ನಷ್ಟು ಹತ್ತಿರ: ಉತ್ತಮ ನಟ, ಉತ್ತಮ ಚಿತ್ರ ವಿಭಾಗಕ್ಕೆ ನಾಮನಿರ್ದೇಶನ
ಯಶಸ್ಸಿನ ಅಲೆಯಲ್ಲಿ ತೇಲಿ ಆಸ್ಕರ್ ಪ್ರಶಸ್ತಿಯ ಕದ ತಟ್ಟಿರುವ ಅಪ್ಪಟ ಕನ್ನಡ ಚಿತ್ರ 'ಕಾಂತಾರ' ತಂಡಕ್ಕೆ ಮತ್ತೊಂದು ದೊಡ್ಡ ಸಿಹಿಸುದ್ದಿ ಸಿಕ್ಕಿದೆ.

ಯಶಸ್ಸಿನ ಅಲೆಯಲ್ಲಿ ತೇಲಿ ಆಸ್ಕರ್ ಪ್ರಶಸ್ತಿಯ ಕದ ತಟ್ಟಿರುವ ಅಪ್ಪಟ ಕನ್ನಡ ಚಿತ್ರ 'ಕಾಂತಾರ'(Kantara film) ತಂಡಕ್ಕೆ ಮತ್ತೊಂದು ದೊಡ್ಡ ಸಿಹಿಸುದ್ದಿ ಸಿಕ್ಕಿದೆ.
ಉತ್ತಮ ಚಿತ್ರ, ಉತ್ತಮ ನಟ ಪೈಪೋಟಿಗಿಳಿದ ಕಾಂತಾರ: ಈ ಬಾರಿಯ ಆಸ್ಕರ್ ಪ್ರಶಸ್ತಿಯ(Oscar award) ಉತ್ತಮ ಚಿತ್ರ ಮತ್ತು ಉತ್ತಮ ನಟ ಸ್ಪರ್ಧಾ ಪಟ್ಟಿಯ ಮುಖ್ಯ ವಿಭಾಗದಲ್ಲಿ ಕಾಂತಾರ ಪ್ರವೇಶ ಪಡೆದಿದೆ. ಇತರ 301 ಚಿತ್ರಗಳ ಜೊತೆ ಕಾಂತಾರ ಮುಂದಿನ ಹಂತದಲ್ಲಿ ಸೆಣೆಸಲಿದೆ.
2023ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜನವರಿ 24ರಂದು ಘೋಷಣೆಯಾಗಲಿದೆ. ಕಾಂತಾರ ಚಿತ್ರ ಈ ಬಾರಿಯ ಆಸ್ಕರ್ ಪ್ರಶಸ್ತಿ ಗೆಲ್ಲುವ ಸಾಧ್ಯತೆಗಳು, ನಿರೀಕ್ಷೆಗಳು ಹೆಚ್ಚಾಗಿವೆ.
ಹರ್ಷ ವ್ಯಕ್ತಪಡಿಸಿದ ಚಿತ್ರತಂಡ: ಆಸ್ಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದಿರುವ ಸುದ್ದಿ ಕೇಳಿ ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿ ಇಡೀ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


