'ಹೊಸ ಪಯಣ ಆರಂಭ': ಮೂರನೇ ಮದುವೆಗೆ ಚಿರಂಜೀವಿ ಪುತ್ರಿ ಶ್ರೀಜಾ ತಯಾರಿ? ಇನ್ಸ್ಟಾ ಪೋಸ್ಟ್ ನಲ್ಲಿ ಸುಳಿವು!
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಅವರು ಸದ್ಯ ಇದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಕೆಲ ವಾಹಿನಿ ಹಾಗೂ ವೆಬ್‌ಸೈಟ್ ವರದಿಗಳ ಪ್ರಕಾರ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ.
ಇದೇನೂ ಹೊಸ ಸುದ್ದಿಯಲ್ಲ. ಕೆಲ ತಿಂಗಳಿನಿಂದ ಈ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಲೇ ಇದೆ. ಅದರೆ ಅದಕ್ಕೆ ಸಾಕ್ಷಿ ಎಂಬಂತೆ ಶ್ರೀಜಾ ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಒಂದು ವೈರಲ್ ಆಗಿದ್ದು, ಬಿಸಿಬಿಸಿ ಚರ್ಚೆ ಶುರುವಾಗಿದೆ.
ಅಷ್ಟಕ್ಕೂ ಶ್ರೀಜಾ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವುದೇನೆಂದರೆ, "ಡಿಯರ್ 2022, ನೀನು ನನಗೆ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡಿಸಿರುವೆ. ನನ್ನ ಬಗ್ಗೆ ಚೆನ್ನಾಗಿ ಅರಿತಿರುವ, ನನ್ನನ್ನು ಬಹಳ ಪ್ರೀತಿಸುವ, ತುಂಬಾ ಕೇರ್ ಮಾಡುವ, ಕಷ್ಟ- ಸುಖದಲ್ಲಿ ನನಗೆ ಸಾಥ್ ನೀಡುತ್ತಿರುವ, ಯಾವಾಗಲೂ ನನಗೆ ಬೆಂಬಲವಾಗಿ ನಿಲ್ಲುವ ವ್ಯಕ್ತಿಯನ್ನು ನೀನು ಭೇಟಿ ಮಾಡಿಸಿರುವೆ. ನನ್ನ- ಅವನ ಭೇಟಿ ನಿಜಕ್ಕೂ ಬಹುದೊಡ್ಡ ಅದ್ಭುತ. ಹೊಸ ಪಯಣ ಶುರುವಾಗುತ್ತಿದೆ" ಎಂದಿದ್ದಾರೆ.
ರೀಜಾ 2007 ರಲ್ಲಿ ಶಿರಿಶ್ ಭಾರದ್ವಾಜ್ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ 2011 ರಲ್ಲಿ ಶಿರಿಶ್ ಅವರಿಗೆ ವಿಚ್ಛೇದನ ನೀಡಿದ್ದರು. ಇವರ ವಿಹಾಹ ಸಂಬಂಧದಲ್ಲಿ ಸಾಕಷ್ಟು ಬಿರುಕು ಮೂಡಿತ್ತು. ಇದು ಮೆಗಾಸ್ಟಾರ್ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿತ್ತು.
ನಂತರ 2016ರಲ್ಲಿ ಶ್ರೀಜಾ ಅವರು ಉದ್ಯಮಿ ಕಲ್ಯಾಣ್ ದೇವ್ ಅವರನ್ನು ಮದುವೆಯಾಗಿದ್ದರು. ಸದ್ಯ ಬಂದಿರುವ ವರದಿಗಳ ಪ್ರಕಾರ ಕಲ್ಯಾಣ್ ದೇವ್ ಜೊತೆ ಸಂಬಂಧವನ್ನು ಕಳೆದುಕೊಳ್ಳಲು ಶ್ರೀಜಾ ಮುಂದಾಗಿದ್ದಾರೆ. ಎಲ್ಲವೂ ಅಂತಿಮಗೊಂಡಿದ್ದು, ಕಾನೂನು ಪ್ರಕಾರ ವಿಚ್ಛೇದನ ಬಾಕಿ ಇದೆ ಎಂದು ತಿಳಿದು ಬಂದಿದೆ.
ಅತ್ತ ಕಲ್ಯಾಣ್ ದೇವ್ ಕೂಡ ಇದೇ ರೀತಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲೂ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. 34 ವರ್ಷದ ಶ್ರೀಜಾ ಕೋನಿಡೇಲಾ ಅವರಿಗೆ ಮೊದಲ ಗಂಡನಿಂದ ಒಂದು ಮಗು ಹಾಗೂ ಎರಡನೇ ಗಂಡನಿಂದ ಒಂದು ಮಗು ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


