ಸಿನಿಮಾ ಸುದ್ದಿ

ಯಾವ ಕಾರಣವೂ ಇಲ್ಲದೇ ಏಕಾ ಏಕಿ ನಟ ಕಿಶೋರ್ ಟ್ಟಿಟ್ಟರ್ ಖಾತೆ ಅಮಾನತು!

ತನ್ನ ನಟನೆಯಿಂದ ಅಪಾರ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿರುವ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ.

ಯಾವ ಕಾರಣವೂ ಇಲ್ಲದೇ ಏಕಾ ಏಕಿ ನಟ ಕಿಶೋರ್ ಟ್ಟಿಟ್ಟರ್ ಖಾತೆ ಅಮಾನತು!
ಕಿಶೋರ್
Published On :

ತನ್ನ ನಟನೆಯಿಂದ ಅಪಾರ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿರುವ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ. ನಟ ಕಿಶೋರ್‌ ಅವರ ಖಾತೆಯನ್ನು ಟ್ವಟಿರ್‌ ಅಮಾನತು ಮಾಡಲಾಗಿದ್ದು, ಸಂಸ್ಥೆಯ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್‌ ಹೇಳಿದೆ. ‌

ಆದರೆ ಯಾವ ಕಾರಣಕ್ಕೆ, ಯಾವ ಟ್ವೀಟ್‌ ಗಾಗಿ ಖಾತೆ ಅಮಾನತು ಮಾಡಲಾಗಿದೆ ಎನ್ನುವುದನ್ನು ಹೇಳಿ ಎಂದು ಅಭಿಮಾನಿಗಳು ಎಲಾನ್‌ ಮಸ್ಕ್‌ ಅವರನ್ನು ಟ್ಯಾಗ್‌ ಮಾಡಿ ಆಗ್ರಹಿಸುತ್ತಿದ್ದಾರೆ.

ಎಲಾನ್‌ ಮಸ್ಕ್‌ ಟ್ವಿಟರ್‌ ಸಿಇಓ ಆದ ಬಳಿಕ ಟ್ವಿಟರ್‌ ನಲ್ಲಿ ಹತ್ತಾರು ಬದಲಾವಣೆಗಳನ್ನು ತಂದಿದ್ದಾರೆ. ಮೊದಲಿದ್ದ ಟ್ವಿಟರ್‌ ನೀತಿ – ನಿಯಮಗಳು ಈಗ ಮತ್ತಷ್ಟು ಕಠಿಣವಾಗಿದೆ. ಯಾವುದೇ ರೀತಿಯ ಮನೋಭಾವಕ್ಕೆ ಧಕ್ಕೆ ತರುವಂತಹ ಟ್ವೀಟ್‌ ಗಳಿದ್ದರೆ, ನಿಯಮವನ್ನು ಉಲ್ಲಂಘಿಸುವ ಟ್ವೀಟ್‌ ಗಳಿದ್ದರೆ ಅಂತಹ ಟ್ವಿಟರ್‌ ಖಾತೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಲಾಗುತ್ತದೆ.

ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಎನ್ನುವ ಸಾಲುಗಳನ್ನು ಇತ್ತೀಚೆಗೆ ನಟ ಕಿಶೋರ್‌ ಅವರು ಬರೆದುಕೊಂಡಿದ್ದರು. ಬಹುಶಃ ಇದೇ ಕಾರಣಕ್ಕೆ ಈ ರೀತಿ ಆಗಿರಬಹುದು ಎಂದು ಕೆಲ ಫ್ಯಾನ್ಸ್‌ ಗಳು ಹೇಳುತ್ತಿದ್ದಾರೆ. ಈ ಬಗ್ಗೆ ಕಿಶೋರ್ ಅವರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಖಾತೆ ಅಮಾನತಿಗೆ ಕಾರಣಗಳು ತಿಳಿದು ಬಂದಿಲ್ಲ.

ಕಿಶೋರ್ ಅವರು ಟ್ವಿಟರ್‌ನಲ್ಲಿ ಆಗಾಗ ಅನೇಕ ಪ್ರಗತಿಪರ ವಿಚಾರಗಳ ಬಗ್ಗೆ ಮುಕ್ತವಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು, ನಟಿ ಸಾಯಿ ಪಲ್ಲವಿ ವಿವಾದವಾದಾಗಲೂ ನಟ ಕಿಶೋರ್, ಜನಗಳ ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ, ಈ ಕೆಲಸದ ಗುತ್ತಿಗೆಯನ್ನು ಮಾಧ್ಯಮ ಯಾವಾಗ ಪಡೆದುಕೊಂಡಿತು? ಸಿನಿಮಾಕರ್ಮಿಗಳು, ನಟ-ನಟಿಯರು ಸಾಮಾಜಿಕ ಅಭಿಪ್ರಾಯವನ್ನು ಹೊಂದುವುದು ಅಪರಾಧವೇ?' ಎಂದು ಪ್ರಶ್ನೆ ಮಾಡಿದ್ದರು. ಕಾಶ್ಮೀರಿ ಪಂಡಿತರ ಹತ್ಯೆ, ಮುಸ್ಲಿಮರ ಮೇಲೆ ದಾಳಿ ಎರಡೂ ಒಂದೇ ಎಂದು ಸಾಯಿ ಪಲ್ಲವಿ ಹೇಳಿದ್ದರು.

ಕಾಂತಾರ ಸಿನಿಮಾ ವಿವಾದವಾದಾಗಲೂ ಕಿಶೋರ್ ಪ್ರತಿಕ್ರಿಯಿಸಿದ್ದರು. ನಂಬಿಕೆ ಇರಬೇಕು, ಆದರೆ, ಮೂಢನಂಬಿಕೆ ಇರಬಾರದು ಎಂದು ಹೇಳಿದ್ದರು. ಎಲ್ಲ ಒಳ್ಳೆಯ ಸಿನಿಮಾಗಳಂತೆ ಕಾಂತಾರ ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ.

ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.