ಸಿನಿಮಾ ಸುದ್ದಿ

ರಾಯರಿಂದ ಈ ತಿರುಕನ ಕನಸು ನನಸಾಗಿದೆ: ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಜಗ್ಗೆಶ್ ಮಾತು!

ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲವನ್ನು ಕೊಡುತ್ತಾರೆ. ಎಂಎಲ್‌ಸಿ ಆಗಬೇಕು ಅಂತ ಕೇಳಿಕೊಂಡಿದ್ದೆ. ಆದರೆ ರಾಜ್ಯಸಭಾ ಸದಸ್ಯ ಸ್ಥಾನ ರಾಯರು ಕೊಟ್ಟಿದ್ದಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.

ರಾಯರಿಂದ ಈ ತಿರುಕನ ಕನಸು ನನಸಾಗಿದೆ: ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಜಗ್ಗೆಶ್ ಮಾತು!
ಮಂತ್ರಾಲಯದಲ್ಲಿ ನಟ ಜಗ್ಗೇಶ್
Published On :

ರಾಯಚೂರು: ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲವನ್ನು ಕೊಡುತ್ತಾರೆ. ಎಂಎಲ್‌ಸಿ ಆಗಬೇಕು ಅಂತ ಕೇಳಿಕೊಂಡಿದ್ದೆ. ಆದರೆ ರಾಜ್ಯಸಭಾ ಸದಸ್ಯ ಸ್ಥಾನ ರಾಯರು ಕೊಟ್ಟಿದ್ದಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್  ಹೇಳಿದ್ದಾರೆ.

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಗ್ಗೇಶ್, ಸಿಎಂ ಬೊಮ್ಮಾಯಿ, ಸಚಿವ ಶ್ರೀರಾಮುಲು, ಅಶ್ವಥ್ ನಾರಾಯಣ್ ಎಲ್ಲರಿಗೂ ಕೇಳಿದ್ದೆ. ಆದರೆ ಎಂಎಲ್‌ಸಿ ಆಗಲಿಲ್ಲ. ಅಚ್ಚರಿ ರೂಪದಲ್ಲಿ ವಾಟ್ಸಪ್ ಕಾಲ್ ಬಂತು, ರಾಜ್ಯಸಭಾ ಸದಸ್ಯನಾದೆ. ಪದವಿ ಮುಖ್ಯವಲ್ಲ. ಅದು ಬರುತ್ತದೆ, ಹೋಗುತ್ತದೆ ಆದರೆ ನಂಬಿಕೆ ಮುಖ್ಯ ಎಂದರು.

ಯಾವುದೇ ರಾಷ್ಟ್ರ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿಯನ್ನು ಮಂತ್ರಾಲಯದಲ್ಲಿ ಪಡೆದ ಅನುಭವವಾಗಿದೆ. ಇದು ಪ್ರಶಸ್ತಿಯಲ್ಲ, ರಾಯರ ಆಶಿರ್ವಾದ. ಈ ತಿರುಕನ ಕನಸನ್ನು ರಾಯರು ನನಸು ಮಾಡಿದ್ದಾರೆ. ನಾನು ನನ್ನ ಪತ್ನಿಯನ್ನು ಪಡೆಯಲು ರಾಯರ ಆಶಿರ್ವಾದವೇ ಕಾರಣ ಎಂದು ಹೇಳಿದ ಜಗ್ಗೇಶ್ ತಮ್ಮ ಲವ್ ಸ್ಟೋರಿ ಹಾಗೂ ಪಟ್ಟ ಕಷ್ಟಗಳನ್ನು ಮೆಲುಕು ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.