ಯುವರಾಜಕುಮಾರ್ ಚೊಚ್ಚಲ ಸಿನಿಮಾಗೆ ರುಕ್ಷ್ಮಿಣಿ ವಸಂತ್ ನಾಯಕಿ!
ಬೀರ್‌ಬಲ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಸದ್ಯ ರಕ್ಷಿತ್ ಶೆಟ್ಟಿ ಜೊತೆಗೆ 'ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮಾಡುತ್ತಿದ್ದಾರೆ. 'ಗೋಲ್ಡನ್ ಸ್ಟಾರ್' ಗಣೇಶ್ ಅವರ 'ಬಾನ ದಾರಿಯಲ್ಲಿ' ಸಿನಿಮಾಗೂ ಇವರೇ ನಾಯಕಿ.

ಬೀರ್‌ಬಲ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಸದ್ಯ ರಕ್ಷಿತ್ ಶೆಟ್ಟಿ ಜೊತೆಗೆ 'ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮಾಡುತ್ತಿದ್ದಾರೆ. 'ಗೋಲ್ಡನ್ ಸ್ಟಾರ್' ಗಣೇಶ್ ಅವರ 'ಬಾನ ದಾರಿಯಲ್ಲಿ' ಸಿನಿಮಾಗೂ ಇವರೇ ನಾಯಕಿ.
ಶ್ರೀಮುರಳಿ ಅವರ ಮುಂದಿನ ಸಿನಿಮಾ 'ಬಘೀರ'ದಲ್ಲೂ ರುಕ್ಮಿಣಿ ವಸಂತ್‌ಗೆ ಚಾನ್ಸ್ ನೀಡಲಾಗಿದೆ. ಹೀಗೆ ಕೈತುಂಬ ಸಿನಿಮಾಗಳನ್ನಿಟ್ಟುಕೊಂಡಿರುವ ರುಕ್ಮಿಣಿ ವಸಂತ್‌ರನ್ನು ಯುವ ರಾಜ್‌ಕುಮಾರ್‌ಗೆ ಜೋಡಿ ಮಾಡುವ ಕುರಿತು ಮಾತುಕತೆ ನಡೆದಿವೆಯಂತೆ.
ಈ ಮಧ್ಯೆ 'ರಾಜಕುಮಾರ' ಮತ್ತು 'ಯುವರತ್ನ' ನಂತರ ಮೂರನೇ ಬಾರಿಗೆ ಸಂತೋಷ್ ಆನಂದ್‌ರಾಮ್ ಅವರ ಜೊತೆಗೆ ಕೈ ಜೋಡಿಸಿರುವ ಹೊಂಬಾಳೆ ಫಿಲ್ಮ್ಸ್, ಯುವ ರಾಜ್‌ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದೀಗ ನಾಯಕಿ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ. ಒಂದುವೇಳೆ, ರುಕ್ಮಿಣಿ ಈ ಸಿನಿಮಾವನ್ನು ಒಪ್ಪಿಕೊಂಡರೆ, ಹೊಂಬಾಳೆ ಫಿಲ್ಮ್ಸ್ ಜೊತೆಗೆ 'ಬಘೀರ' ನಂತರ ಇದು ಅವರ ಎರಡನೇ ಸಿನಿಮಾವಾಗಲಿದೆ.

ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಯೊಂದಿಗೆ ರುಕ್ಮಿಣಿ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತದೆ. ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸಂತೋಷ್ ಆನಂದ್‌ರಾಮ್-ಯುವರಾಜ್‌ಕುಮಾರ್ ಚಿತ್ರವನ್ನು ಪ್ರೊಡಕ್ಷನ್ ಹೌಸ್ ಒಂದೆರಡು ತಿಂಗಳ ಹಿಂದೆ ಘೋಷಿಸಿತು.
ಚಿತ್ರದ ಜೊತೆಗೆ ವಿಶೇಷ ಟಿಪ್ಪಣಿಯಲ್ಲಿ ಪರಂಪರೆ ಮುಂದುವರಿಯುತ್ತದೆ ಎಂದು ಶೀರ್ಷಿಕೆ ನೀಡಲಾಯಿತು. ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ ಹಾಗೂ ದಂತಕಥೆ ಡಾ. ರಾಜ್‌ಕುಮಾರ್ ಅವರ ಕುಟುಂಬದ ನಡುವಿನ ಬಾಂಧವ್ಯವನ್ನು ವಿವರಿಸಿದೆ. ಯುವರಾಜ್‌ಕುಮಾರ್ ಪ್ರಸ್ತುತ ಪಾತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ ಮತ್ತು ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು (ಮಾರ್ಚ್ 17) ಯೋಜನೆಯನ್ನು ಕಿಕ್‌ಸ್ಟಾರ್ಟ್ ಮಾಡಲು ತಯಾರಕರು ಎದುರು ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


