ಸಿನಿಮಾ ಸುದ್ದಿ

'ಶ್ರೀಗೌರಿ'ಯಾಗಿ ಮತ್ತೆ ಕಿರುತೆರೆಗೆ ಬಂದ 'ಕಮಲಿ': ಅಮೂಲ್ಯ ಗೌಡ ಎಂಟ್ರಿಗೆ ಫ್ಯಾನ್ಸ್ ಫಿದಾ!

ಕಮಲಿ, ಬಿಗ್ ಬಾಸ್ ಶೋ ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ ಇದೀಗ ಶ್ರೀಗೌರಿಯಾಗಿ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ.

'ಶ್ರೀಗೌರಿ'ಯಾಗಿ ಮತ್ತೆ ಕಿರುತೆರೆಗೆ ಬಂದ 'ಕಮಲಿ': ಅಮೂಲ್ಯ ಗೌಡ ಎಂಟ್ರಿಗೆ ಫ್ಯಾನ್ಸ್ ಫಿದಾ!
ಅಮೂಲ್ಯ ಗೌಡ
Published On :

ಕಮಲಿ, ಬಿಗ್ ಬಾಸ್ ಶೋ  ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ ಇದೀಗ ಶ್ರೀಗೌರಿಯಾಗಿ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ.

ಕಳೆದ ಬಿಗ್ ಬಾಸ್ ಸೀಸನ್ 9ರಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡ ಮೇಲೆ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರು. ಈಗ ‘ಶ್ರೀಗೌರಿ’ ಎಂಬ ಹೊಸ ಧಾರಾವಾಹಿಯನ್ನ ನಟಿ ಒಪ್ಪಿಕೊಂಡಿದ್ದಾರೆ. ಪ್ರೋಮೋದಲ್ಲಿ ನಟಿಯ ಲುಕ್ ರಿವೀಲ್ ಆಗಿದೆ. ಅಮೂಲ್ಯ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಪ್ರೊಮೋದಲ್ಲಿ ಪ್ರತಿ ಇರುವೆಗೂ ಕೂಡ ನೋವು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುವ ಹುಡುಗಿ, ಯಾವ ರೀತಿ ಲೆಕ್ಕ ಹಾಕಿದರೂ ಇವಳೇ ಸರಿ, ಯಾವಾಗಲೂ ಹೀಗೆ ಪ್ರೀತಿಯಲ್ಲಿ ನನ್ನ ಕಟ್ಟಿ ಹಾಕಿ ಬಿಡುತ್ತಾಳೆ, ನನ್ನ ಮಗಳು, ನನ್ನ ಉಸಿರು, ನನ್ನ ಗೌರಿ, ಆದರೆ ರಾತ್ರಿ ಹೊತ್ತಿಗೆ ನನ್ನ ಉಸಿರೇ ನಿಂತು ಹೋಗುತ್ತೆ, ಮುದ್ದಿನ ಮಗಳಿಗೆ ಪ್ರತಿ ರಾತ್ರಿ ಗ್ರಹಣ ಎಂದು ಪ್ರೋಮೋದಲ್ಲಿದೆ.

ಇಷ್ಟು ದಿನ ನೀವೆಲ್ಲಾ ಕೊಟ್ಟ ಪ್ರೀತಿಗೆ ಚಿರರುಣಿ. ಈಗ ಕಲರ್ಸ್ ಕನ್ನಡದ ಮೂಲಕ ಶ್ರೀಗೌರಿಯಾಗಿ ನಿಮ್ಮ ಮುಂದೆ ಬರ್ತಿದ್ದೀನಿ. ಮೊದಲಿಗಿಂತ ದುಪ್ಪಟ್ಟು ಪ್ರೀತಿಯಿಂದ ಮೆಚ್ಚಿ ಹಾರೈಸ್ತೀರ ಅಲ್ವಾ? ಎಂದು ಅಮೂಲ್ಯಗೌಡ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಕಥೆಯಾಗಿದ್ದು, ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಅಭಿನಯಿಸಿದ್ದಾರೆ. ಮಗಳು ಗೌರಿಯಾಗಿ ಅಮೂಲ್ಯ ಗೌಡ ಬಣ್ಣ ಹಚ್ಚಿದ್ದಾರೆ. ನಾಯಕಿ ಅಮೂಲ್ಯ ಎಂಬುದು ರಿವೀಲ್ ಆಗಿದೆ. ಆದರೆ ನಾಯಕ ನಟ ಯಾರು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಬಿಟ್ಟು ಕೊಟ್ಟಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.